Published
6 months agoon
By
Akkare News
ಪುತ್ತೂರು: ಕಬಕ ಪೇಟೆ ಸಮೀಪದ ಕುಳ ಗ್ರಾಮಕರಣಿಕರ ಕಛೇರಿ ಬಳಿ ಜೂನ್ 10ರಂದು ರಾತ್ರಿ ಚಿರತೆ ಪ್ರತ್ಯಕ್ಷ ವಾಗಿದೆ ಎನ್ನುವ ಸುದ್ದಿ ಹಬ್ಬಿದ್ದು ಚಿರತೆ ಓಡಾಡಿದ ರೀತಿಯ ಹೆಜ್ಜೆ ಗುರುತುಗಳು ಸ್ಥಳದಲ್ಲಿ ಪತ್ತೆಯಾಗಿದೆ
ಮಾತ್ರವಲ್ಲದೆ ನಾಯಿಯನ್ನು ಕೂಡಾ ಚಿರತೆ ಭೇಟೆಯಾಡಿದೆ ಎನ್ನಲಾಗಿದೆ. ಕುಳದಲ್ಲಿ ಅಂಗನವಾಡಿ ಕೇಂದ್ರ ಮತ್ತು ಗ್ರಾಮಕರಣಿಕರ ಕಛೇರಿ ಇದೆ. ಜೂನ್ 10ರಂದು ರಾತ್ರಿ ನಾಯಿಗಳು ಜೋರಾಗಿ ಬೊಗಳುತ್ತಿರುವುದನ್ನು ಹತ್ತಿರದ ಮನೆಯವರು ಕಿಟಕಿ ಮೂಲಕ ನೋಡಿದ್ದಾಗ ಯಾವುದೋ ಪ್ರಾಣಿಯೊಂದು ನಾಯಿಯನ್ನು ಕೊಂದು ಕೊಂಡೊಯ್ಯುತಿದ್ದನ್ನು ಕಂಡು ಗಾಬರಿಯಿಂದ ನೆರೆಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರಿಗೆ ಚಿರತೆಯದ್ದು ಎನ್ನಲಾದ ಹೆಜ್ಜೆ ಗುರುತು ಸ್ಥಳದಲ್ಲಿ ಕಂಡು ಬಂದಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ರವಾನಿಸಲಾಗಿದೆ. ಚಿರತೆ ಬಂದ ಸುದ್ದಿ ಕೇಳಿ ಕಬಕ ಆಸುಪಾಸಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.