ನಮ್ಮೊಂದಿಗೆ ಸಂಪರ್ಕ ಸಾಧಿಸಿ

ನಿಧನ

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು

Published

on

ಪುತ್ತೂರು : ಆರ್ ಸಿಸಿ ಮನೆಯೊಂದರ ಮೇಲೆ ಶೀಟ್ ಅಳವಡಿಸುವ ಸಂದರ್ಭ ಯುವಕನೋರ್ವ ಮೃತಪಟ್ಟ ಘಟನೆ ಬೆದ್ರಾಳದಲ್ಲಿ ನಡೆದಿದೆ.

ವೆಲ್ಡಿಂಗ್ ಕೆಲಸದ ಸಹಾಯಕನಾಗಿದ್ದ, ಕಾಸರಗೋಡು ಮೂಲದ ವೆಳ್ಳರಿಕುಂಡು ಕಲ್ಲಹಳ್ಳಿ ನಿವಾಸಿ ಸೋಮಯ್ಯ ಎಂಬವರ ಪುತ್ರ ದೀಕ್ಷಿತ್ ಎಸ್.ಎಂ.(26) ಮೃತಪಟ್ಟ ಯುವಕ.

 

ದೀಕ್ಷಿತ್, ಸೋಮಯ್ಯ ಗೌಡ ಅವರ ಹೆಂಡತಿಯ ಅಣ್ಣನ ಮಗ ಪ್ರಜ್ವಲ್‌ರೊಂದಿಗೆ ವೆಲ್ಡಿಂಗ್ ಕೆಲಸಕ್ಕೆ ಸಹಾಯಕನಾಗಿ ಹೋಗುತ್ತಿದ್ದು, ಜು.11ರಂದು ಕೆಮ್ಮಿಂಜೆ ಗ್ರಾಮದ ಬೆದ್ರಾಳದ ಆರ್‌ಸಿಸಿ ಮನೆಯೊಂದರಲ್ಲಿ ಶೀಟ್ ಹಾಕುವ ಕೆಲಸ ಮಾಡುತ್ತಿದ್ದ ಸಂದರ್ಭ ದೀಕ್ಷಿತ್ ಬೊಬ್ಬೆ ಹೊಡೆದು ಆರ್‌ಸಿಸಿಯಲ್ಲಿ ಅಂಗಾತನೆ ಮಲಗಿ ಉಸಿರಾಡಲಾಗದೆ ಒದ್ದಾಡುತ್ತಿದ್ದರು.

 

ತಕ್ಷಣ ಅವರನ್ನು ಪ್ರಜ್ವಲ್ ಮತ್ತು ಪೈಂಟಿಂಗ್ ಕೆಲಸ ಮಾಡುತ್ತಿದ್ದವರು ಹಾಗೂ ಮನೆಯ ಮಾಲಕ ಯೋಗೀಶ್ ರವರ ಪುತ್ರ ಕಾರೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಪರೀಕ್ಷಿಸಿ ದೀಕ್ಷಿತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಬಂದ ಬಳಿಕ ಸಾವಿಗೆ ಕಾರಣ ತಿಳಿಯಬೇಕಿದೆ.

ಇಂದು ರಾತ್ರಿ ತಾಪಮಾನವು 25 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಕಡಿಮೆ ಇರುವ ನಿರೀಕ್ಷೆ ಇದೆ. ಇದರಿಂದಾಗಿ, ರಾತ್ರಿ ಸಮಯದಲ್ಲಿ ತಂಪಾದ ವಾತಾವರಣದ ಅನುಭವ ನೀಡಲಿದೆ. ಹೀಗಾಗಿ, ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version