Published
2 months agoon
By
Akkare News
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ವನಭೋಜನಕ್ಕೆ ತೆರಳಿದ್ದ ಹಾರ್ಡ್‌ವೇರ್ ಅಂಗಡಿ ಮಾಲೀಕ ಹರಿಪ್ರಸಾದ್ (40) ಹಾಗೂ ಕಾರ್ಮಿಕ ಸುಜೀತ್ (26) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಮೃತ ಯುವಕರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (37) ಹಾಗೂ ಸುಜಿತ್ (26) ಎಂದು ಗುರುತಿಸಲಾಗಿದೆ.
ಮೃತರಿಬ್ಬರೂ ಅವಿವಾಹಿತರಾಗಿದ್ದು, ತಮ್ಮ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕುಮಾರಧಾರ ನದಿಗೆ ಕುಲ್ಕುಂದ ಬಳಿ ಇಳಿದಿದ್ದು, ಈ ವೇಳೆ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ನೀರಲ್ಲಿ ಮುಳುಗಿದ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾರ್ಟಿ ಮಾಡಿದ್ದ ಶಂಕೆ: ಯುವಕರ ತಂಡವೊಂದು ನದಿಯ ನಿರ್ಜನ ಪ್ರದೇಶದ ತಟದಲ್ಲಿ ಪಾರ್ಟಿ ಮಾಡಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ನದಿ ತೀರದಲ್ಲಿ ಅನ್ನವನ್ನು ಚೆಲ್ಲಿರುವುದು ಕಂಡುಬಂದಿದೆ. ಪಾರ್ಟಿ ಮಾಡಿದ ಬಳಿಕ ಯುವಕರು ನದಿಯಲ್ಲಿ ಸ್ನಾನಕ್ಕಿಳಿದಿರಬಹುದು ಅಥವಾ ಈಜಲು ಹೋಗಿರಬಹುದು ಎಂದು ಶಂಕಿಸಲಾಗಿದೆ. ತಮ್ಮ ಪರಿಚಿತ ಸುಮಾರು 10 ಜನರ ತಂಡ ದೊಂದಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಹಾಗೂ ತನಿಖೆ ಮುಂದುವರಿದಿದೆ. ಪೊಲೀಸರ ವಿಚಾರಣೆಯ ನಂತರವಷ್ಟೇ ಘಟನೆಯ ಪೂರ್ಣ ವಿವರ ಹಾಗೂ ಯುವಕರ ಗುರುತು ಪತ್ತೆಯಾಗಲಿದೆ.