Connect with us

ನಿಧನ

ಅಪಘಾತಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಪಂಚಾಕ್ಷರಿ ಲೈಟಿಂಗ್ಸ್ ಮಾಲಕ ಗಣೇಶ್ ಗೌಡ ನಿಧನ

Published

on

ಪುತ್ತೂರು: 2 ತಿಂಗಳ ಹಿಂದೆ ಬದಿಯಡ್ಕದಲ್ಲಿ ರಸ್ತೆ ಅಪಘಾತಗೊಂಡು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬನ್ನೂರು ಕರ್ಮಲ ನಿವಾಸಿ ಪಂಚಾಕ್ಷರಿ ಲೈಟಿಂಗ್‌ನ ಮಾಲಕ ಗಣೇಶ್ ಗೌಡ ಫೆ.3ರಂದು ಬೆಳಗ್ಗೆ ನಿಧನರಾದರು.

ಡಿ.6ರಂದು ಬದಿಯಡ್ಕದಲ್ಲಿ ಲೈಟಿಂಗ್ಸ್ ವಿಚಾರದಲ್ಲಿ ಹೋದ ಅವರು ಸ್ಕೂಟರ್ ಅಪಘಾತಗೊಂಡು ತೀವ ಗಾಯಗೊಂಡಿದ್ದರು. ಗಾಯಾಳುವನ್ನು ಸ್ಥಳೀಯರು ಸೇರಿ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಫೆ.3ರಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಪುತ್ರರಾದ ಪ್ರದೀಪ್ ಮತ್ತು ಧನಂಜಯ ಅವರನ್ನು ಅಗಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version