Published
5 months agoon
By
Akkare Newsವಯನಾಡು ದುರಂತ ಸ್ಥಳಕ್ಕೆ ಸುಮಾರು ಹತ್ತು ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ದ.ಕ ಜಿಲ್ಲೆಯಿಂದ ಮೊದಲ ಭಾರಿ SKSSF ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ವಿವಿಧ ವಲಯ ಸಮಿತಿಗಳ ಸಹಕಾರದೊಂದಿಗೆ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ನವವಿ ಯವರ ನೇತೃತ್ವದಲ್ಲಿ ವಸ್ತ್ರ ಮತ್ತು ಆಹಾರ ಸಾಮಗ್ರಿಗಳನ್ನು ಜೆಎಸ್ಎಂ ಅಲ್ ಬಿರ್ರ್ ಸಂಸ್ಥೆಯಲ್ಲಿ ಸಂಗ್ರಹಿಸಿ ಆಗಸ್ಟ್ ಒಂದರಂದು ರಾತ್ರಿ 10 ಗಂಟೆಗೆ ಕಳುಹಿಸಿಕೊಡಲಾಯಿತು.
ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಿವಿಧ ನಾಯಕರುಗಳು ಹಾಗೂ ವಿವಿಧ ವಲಯದ ನಾಯಕರುಗಳ ಹಾಗೂ ವಿಖಾಯದ ಕಾರ್ಯಕರ್ತರ ಶ್ರಮ ದಾನವು ಶ್ಲಾಘನೀಯ ಕಾರ್ಯವನ್ನು ಜಿಲ್ಲಾಧ್ಯಕ್ಷರು ಅಭಿನಂದಿಸಿ ಮಾತನಾಡಿ ವಯನಾಡ್ ದುರಂತದಲ್ಲಿ ಬಲಿಯಾದವರಿಗೆ ಮತ್ತು ಸಂಕಷ್ಟಕ್ಕೆ ಒಳಗಾದ ಜನತೆಗಾಗಿ ಪ್ರಾರ್ಥಿಸಿಲಾಯಿತು.
ನೆರೆದ ಎಲ್ಲಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಸಹಕಾರಗಳನ್ನು ಸ್ಮರಿಸಿಕೊಂಡು ಶಂಸುದ್ದೀನ್ ಹನೀಫಿ ಧನ್ಯವಾದ ಸಮರ್ಪಿಸಿದರು.
‘
ವಯನಾಡು ದುರಂತದ ನಿರಾಶ್ರಿತರಿಗೆ ಸಮಸ್ತ ಮತ್ತು ಪೋಷಕ ಸಂಘಟನೆಗಳಿಂದ ವಿವಿಧ ಭಾಗಗಳಿಂದ ಬರುವ ಸಹಕಾರಗಳ ಕ್ರೋಡೀಕರಣ ಕೇಂದ್ರ ಸಮಸ್ತ ಕಂಟ್ರೋಲ್ ರೂಂ ಕಲ್ಪಟ್ಟ ಕಚೇರಿಯಲ್ಲಿ SKSSF ವಯನಾಡು ಜಿಲ್ಲಾಧ್ಯಕ್ಷರಾದ ನೌಶೀರ್ ವಾಫಿ ಸಾಮಗ್ರಿಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಾರಿಸ್ ಕೌಸರಿ, ಪಿ ಎ ಅಸ್ಲಾಮಿ ಮರ್ದಾಳ,ರಶೀದ್ ರಹ್ಮಾನಿ ಪರ್ಲಡ್ಕ , ಬಾತಿಶಾ ಹಾಜಿ ಪಟ್ರಕೋಡಿ,ಶಂಸುದ್ದೀನ್ ಹನೀಫಿ ಮರ್ದಾಳ,ಸ್ವದಕತುಲ್ಹಾ ದಾರಿಮಿ ಕಕ್ಕಿಂಜೆ,ಯಾಸಿರ್ ಚಿಬಿದ್ರೆ,ಅಶ್ರಫ್ ಮುಕ್ವೆ, ಶಾಫಿ ಪಾಪೆತ್ತಡ್ಕ,ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ,ರಝಾಕ್ ಅಝ್ಹರಿ ಸವಣೂರು,ಆಸಿಫ್ ಗಂಡಿಬಾಗಿಲು,ಶರೀಫ್ ಮುಕ್ರಂಪಾಡಿ, ಶಾಹಿರ್ ಯಮಾನಿ ಪೋಲ್ಯ, ಸಿನಾನ್ ಪರ್ಲಡ್ಕ,
ಮುಹಮ್ಮದ್ ಮಿಸ್ಬ ಕಡವ, ಶರೀಫ್ ದಾರಿಮಿ ಸವಣೂರು,ತ್ವಾಹ ನಮನಪರ್ಲಡ್ಕ , ಅಲಿ ಪರ್ಲಡ್ಕ , ಸುಹೈಲ್ ಪರ್ಲಡ್ಕ,ನೌಷಾದ್ ಯಮಾನಿ ಬೀಟಿಗೆ,ಹಮೀದ್ ಪಿ.ಎಸ್ ಪರ್ಲಡ್ಕ ಉಪಸ್ಥಿತರಿದ್ದರು.
🖋️ ಅಬ್ದುಲ್ ಖಾದರ್ ಪಾಟ್ರಕೊಡಿ