Published
5 months agoon
By
Akkare Newsಮಂಗಳೂರು: ಮಂಗಳೂರಿನ ಪಾಂಡೇಶ್ವರದ ಬಳಿ ಇರುವ ಮಾಲ್‌ವೊಂದರ ಬಾರ್‌ವೊಂದರಲ್ಲಿ ಇಬ್ಬರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿದ ವಿನಯ್(33), ಮಹೇಶ್(27), ಪುತ್ತೂರಿನ ಪ್ರೀತೇಶ್(34) ಮತ್ತು ನಿತೇಶ್(33) ಎಂಬವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಬಿಜೈನ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿರುವ 22 ವರ್ಷದ ಯುವತಿ ಶನಿವಾರ ಫೋರಂ ಮಾಲ್‌ನಲ್ಲಿರುವ ಬಾರ್‌ಗೆ ತನ್ನ ಸ್ನೇಹಿತೆಯೊಂದಿಗೆ ಹೋಗಿದ್ದರು. ಸುಮಾರು 11 ಗಂಟೆ ವೇಳೆಗೆ ವಾಶ್‌ರೂಮ್‌ನತ್ತ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳಲ್ಲಿ ಒಬ್ಬ ಮಹಿಳೆಯೊಬ್ಬಳನ್ನು ತಬ್ಬಿಕೊಂಡಿದ್ದಾನೆ.
ಅವಳು ಅವನನ್ನು ಪ್ರಶ್ನಿಸಿದಾಗ ಇನ್ನೂ ಮೂವರು ಬಂದು ಆತನ ಜೊತೆ ಸೇರಿಕೊಂಡು ನಿಂದಿಸಿದ್ದಾರೆ. ಒಬ್ಬ ವ್ಯಕ್ತಿ ಬಿಯರ್ ಬಾಟಲಿಯಿಂದ ಇಬ್ಬರು ಮಹಿಳೆಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಮಂಗಳೂರು ದಕ್ಷಿಣ ಪೊಲೀಸರು ಮಹಿಳೆಯ ದೂರನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74, 79, 352 ಮತ್ತು 3(5) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಭಾನುವಾರ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.