Published
4 months agoon
By
Akkare Newsಉತ್ತರ ಪ್ರದೇಶದ ಆಯೋಧ್ಯೆಯ ರಾಮಪಥ ಮತ್ತು ಭಕ್ತಿಪಥ ಮಾರ್ಗಗಳಲ್ಲಿ ಅಳವಡಿಸಲಾಗಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ದೀಪಗಳು ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೂ. 50 ಲಕ್ಷ ಮೌಲ್ಯದ 36 ಪ್ರೊಜೆಕ್ಟರ್ ಲೈಟ್ ಹಾಗೂ 3,800 ವಿವಿಧ ಪ್ರಕಾರ ದೀಪಗಳು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬೀದಿ ದೀಪಗಳನ್ನು ಅಳವಡಿಸಲು ಅಯೋಧ್ಯೆ ಅಭಿವೃದ್ದಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದುಕೊಂಡಿರುವ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಅಟೋಮೊಬೈಲ್ಸ್ ನೀಡಿರುವ ದೂರಿನ ಮೇರೆಗೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವರದಿಗಳ ಪ್ರಕಾರ, ದೀಪಗಳು ಕಳವಾಗಿರುವುದು ಮೇ ತಿಂಗಳಲ್ಲೇ ಗುತ್ತಿಗೆದಾರರ ಗಮನಕ್ಕೆ ಬಂದಿತ್ತು. ಆದರೆ, ಅವರು ಆಗಸ್ಟ್ 9ರಂದು ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.