Published
4 months agoon
By
Akkare Newsಮುಂಬೈ: ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆಗಳಾಯ್ತು, ಇದೀಗ ಬೆಳ್ಳುಳ್ಳಿನೂ ನಕಲಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೆಳ್ಳುಳ್ಳಿ ಸಿಪ್ಪೆ ಸುಲಿಯುತ್ತಿರುವಾಗ ನಕಲಿ ಬೆಳ್ಳುಳ್ಳಿ ಎಂದು ಗೊತ್ತಾಗಿರುವ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಕೋಲಾದ ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಮನೆಗೆ ಮಾರುಕಟ್ಟೆಯಿಂದ ಬೆಳ್ಳುಳ್ಳಿ ಖರೀದಿ ಮಾಡಿ ತಂದಿದ್ದರು. ಆದ್ರೆ ತಂದಿದ್ದ ಬೆಳ್ಳುಳ್ಳಿ ನಕಲಿ ಎಂದು ಗೊತ್ತಾಯ್ತು.
ಸಿಮೆಂಟ್‌ನಿಂದ ಬೆಳ್ಳುಳ್ಳಿಯ ಆಕಾರ ನೀಡಿ ತಯಾರಿಸಿ ನಂತರ ಬಣ್ಣ ನೀಡಲಾಗಿರುವ ನಕಲಿ ಬೆಳ್ಳುಳ್ಳಿ ಇದಾಗಿತ್ತು. ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ತುಂಬಾ ಗಟ್ಟಿಯಾಗಿರುವ ಅನುಭವವಾಗಿದ್ದು, ಒಳಗಡೆ ನೋಡಿದಾಗ ಸಿಮೆಂಟ್ ಕಂಡುಬಂದಿದೆ.
ಬೆಳ್ಳುಳ್ಳಿ ದರ ಗಗನಕ್ಕೇರುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ದರ ೦೦-35೦ ರೂ.ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಲಭ ಹಣ ಮಾಡುವ ಮಾರ್ಗ ಹುಡುಕುವ ದುರುಳರು ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿಯನ್ನು ಅಸಲಿ ಬೆಳ್ಳುಳ್ಳಿಯೊಂದಿಗೆ ಮಿಶ್ರಣ ಮಾಡಿ ತೂಕ ಜಾಸ್ತಿ ಮಾಡಿ ಮಾರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಕಲಿ ಬೆಳ್ಳುಳ್ಳಿ ಒಡೆದಾಗ ಅದರಲ್ಲಿ ಸಿಮೆಂಟ್ ಪುಡಿ ಉದುರುತ್ತಿವೆ.