ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

“ಶ್ರೀ ಶಾರದಾಂಭ ಸೇವಾ ಸಮಾಜ” ಮತ್ತು “ಆರ್ಯ ತಂಡ” ದ ಸಹಭಾಗಿತ್ವ ದಲ್ಲಿ ಉಚಿತ ಆರೋಗ್ಯ ತಪಾಸಣಿ ಮತ್ತು ಚಿಕಿತ್ಸಾ ಶಿಬಿರ

Published

on

“ಶ್ರೀ ಶಾರದಾಂಭ ಸೇವಾ ಸಮಾಜ” ಮತ್ತು “ಆರ್ಯ ತಂಡ” ದ ಸಹಭಾಗಿತ್ವ ದಲ್ಲಿ ದಿನಾಂಕ 25.08.2024 ನೇ ಆದಿತ್ಯವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ” ದೇರಳ ಕಟ್ಟೆ ಇವರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ” ಉಚಿತ ಆರೋಗ್ಯ ತಪಾಸಣಿ ಮತ್ತು ಚಿಕಿತ್ಸಾ ಶಿಬಿರವು ” ನಮ್ಮ ಸಮಾಜದ ” ಶ್ರೀ ಶಾರದಾ ಭವನ ” ಬಪ್ಪಳಿಗೆ ಪುತ್ತೂರು ಇಲ್ಲಿ ನಡೆಯಲಿದ್ದು ಈ ಕೆಳಗೆ ತಿಳಿಸಿರುವ ವಿವಿಧ ತಪಾಸಣೆಯ ವಿಭಾಗಕ್ಕೆ ಸಂಭಂದ ಪಟ್ಟ ಅನಾರೋಗ್ಯ ಇದ್ದ ನಮ್ಮ ಸಮಾಜದ ಪ್ರತಿಯೊಬ್ಬರೂ ಇದರ ಸೇವೆಯನ್ನು ಪಡೆದುಕೊಳ್ಳಬೇಕಾಗಿ ವಿನಂತಿ🙏.

 

1.ಸಾಮಾನ್ಯ ವೈದ್ಯಕೀಯ ವಿಭಾಗದಲ್ಲಿ ನುರಿತ ತಜ್ಞರಿಂದ ನಿಮ್ಮ ಆರೋಗ್ಯ ತಪಾಸಣೆ ಮಾಡುವುದಲ್ಲದೆ ಆಗತ್ಯ ಕಂಡು ಬಂದರೆ ಬಿ ಪಿ, ಶುಗರ್ ಟೆಸ್ಟ್, ಅಲ್ಲದೆ ಹೃದಯಕ್ಕೆ ಸಂಬಂಧಿಸಿ ಇ ಸಿ ಜಿ ಕೂಡಾ ಪ್ರೀಯಾಗಿ ಮಾಡುತ್ತಾರೆ, ಅಲ್ಲದೆ ಅವರಲ್ಲಿ ಲಭ್ಯವಿರುವ ಔಷದೀಯನ್ನು ನೀಡುತ್ತಾರೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಉಚಿತ ಕಾರ್ಡನ್ನು ಕೊಟ್ಟು ಆಸ್ಪತ್ರೆಗೆ ಬರಲು ತಿಳಿಸುತ್ತಾರೆ.

2. ಕಿ ವಿ, ಗಂಟಲು, ಮೂಗಿನ ತಪಾಸಣೆಯನ್ನು ತಜ್ಞ ವೈದ್ಯರು ಮಾಡಿ ಬೇಕಾದ ಚಿಕಿತ್ಸೆಯನ್ನು ನೀಡುವರು.
3. ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಚರ್ಮ ತಜ್ಞರು ತಪಾಸಣೆ ಮಾಡಿ ಚಿಕಿತ್ಸೆಯನ್ನು ತಿಳಿಸುವರು

 

ಎಲುಬು, ಕೀಲು ರೋಗಗಳ ವಿಭಾಗದಲ್ಲಿ ತಜ್ಞ ವೈದ್ಯರು ಪರೀಕ್ಷಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವರು.
5. ಕಣ್ಣಿನ ವಿಭಾಗದಲ್ಲಿ ತಜ್ಞ ವೈದ್ಯರು ಕಣ್ಣಿನ್ನು ಪರೀಕ್ಷಿಸಿ ಅಗತ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನು ತಿಳಿಸುವರು. ಕಣ್ಣಿನ ಪರೆಯ ಅಪರೇಷನ್ ಅವಶ್ಯ ಇದ್ದರೆ ಅವರು ಮುಂದಿನ ದಿನಾಂಕವನ್ನು ತಿಳಿಸಿ ನಿಟ್ಟೆ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡುವರು. ಪವರ್ ಟೆಸ್ಟ್ ಮಾಡಿಸಿ ಕನ್ನಡಕ ಅಗತ್ಯ ಬಿದ್ದರೆ ಕನ್ನಡಕ ತಿಳಿಸುವರು ಇದನ್ನು ” ಆರ್ಯ ತಂಡದ ” ಕಡೆಯಿಂದ ಉಚಿತವಾಗಿ ನೀಡಲಾಗುವುದು
6. ದಂತ ವಿಭಾಗದಲ್ಲಿ ಪ್ರತ್ಯೇಕವಾಗಿ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಸಂಪೂರ್ಣ ತಂಡ ಬಂದು ಹಲ್ಲಿಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಯನ್ನು ಮತ್ತು ಹಲ್ಲಿನ ಕ್ಲೀನಿಂಗ್, ಹಲ್ಲು ಕೀಳುವುದು ಮತ್ತು ಹಲ್ಲಲ್ಲಿ ತೂತು ಇದ್ದರೆ ಪಿಲ್ ಕೂಡಾ ಮಾಡುತ್ತಾರೆ.

ವಿಶೇಷ ಸೂಚನೆ 1: ಮುಂದಿನ ಚಿಕಿತ್ಸೆಗೆ ಕಾರ್ಡ್ ಕೊಟ್ಟರೆ ಆ ಕಾರ್ಡನ್ನು ದೇರಳಕಟ್ಟೆ ಆಸ್ಪತ್ರೆ ಅಲ್ಲದೆ ಅವರ ಪರಂಗಿಪೇಟೆಯಲ್ಲಿರುವ ಆಸ್ಪತ್ರೆ ಮತ್ತು ಸುಬ್ರಹ್ಮಣ್ಯದಲ್ಲಿರುವ ಆಸ್ಪತ್ರೆಯಲ್ಲೂ ಉಚಿತವಾಗಿ ಚಿಕಿತ್ಸೆಯನ್ನು ಮಾಡುತ್ತಾರೆ.

 

2) ವಯಸ್ಸಾದವರು, ಬರಲ್ಲಿಕ್ಕೆ ಕಷ್ಟವಾಗುವ ನಮ್ಮ ಸಮಾಜದ ಬಂದುಗಳು ಪುತ್ತೂರಿನ ನಗರಸಭೆಯ ಹತ್ತಿರ ಅಥವಾ ಹೈವೆಯಿಂದ ಬಪ್ಪಲಿಗೆ ಬರುವ ದಾರಿಯಲ್ಲಿ ನಿಂತರೆ ನಾವು ವಾಹನ ವ್ಯವಸ್ಥೆಯನ್ನು ಮಾಡಿದ್ದೆವೆ ( ಮಾರುತಿ ವ್ಯಾನಿನ ವ್ಯವಸ್ಥೆ) ಅದರ ಉಪಯೋಗವನ್ನು ಪಡೆಯಬಹುದು.

ಮತ್ತೋಮ್ಮೆ ತಮ್ಮೇಲ್ಲರಲ್ಲೂ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿ ಅಂತ ಆರ್ಯ ತಂಡದ ಪರವಾಗಿ ಮನವಿ ಮಾಡುತ್ತಿದ್ದೆವೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version