ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ E -KYC ಗೆ ಆಗಸ್ಟ್ 31 ಡೆಡ್ ಲೈನ್

Published

on

ಪಡಿತರ ಚೀಟಿದಾರರು ಪ್ರತೀ ತಿಂಗಳು ಪಡಿತರ ಪಡೆಯುವುದಲ್ಲದೆ ಅನ್ನ ಭಾಗ್ಯ ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

 

 

ಸರಕಾರವು ಕಳೆದ 5 ವರ್ಷಗಳಿಂದ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವಂತೆ ನಿರ್ದೇಶನ ನೀಡಿದ್ದರೂ ಕೆಲವೊಂದು ಪಡಿತರ ಚೀಟಿ ಸದಸ್ಯರು ಇನ್ನೂ ಇ-ಕೆವೈಸಿ ಮಾಡದೇ ಇರುವುದು ಕಂಡುಬರುತ್ತಿದೆ.

ಪ್ರಸ್ತುತ ಸರಕಾರವು ಯಾವುದೇ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲೂ ಕೂಡಾ ಅವಕಾಶ ಕಲ್ಪಿಸಿರುತ್ತದೆ. ಜೀವಮಾಪನ ನೀಡಿ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಸದಸ್ಯರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡುವುದು. ಸರಕಾರವು ಆ.31 ರವರೆಗೆ ಅವಕಾಶ ಕಲ್ಪಿಸಿದ್ದು ತಪ್ಪದೆ ಇ-ಕೆವೈಸಿ ಮಾಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿ ಇ-ಕೆವೈಸಿಯನ್ನು ಮಾಡುವಂತೆ ತಿಳಿಸಿದೆ.

 

ಇದು ಪಡಿತರ ಚೀಟಿದಾರರಿಗೆ ಕೊನೆಯದಾಗಿ ತಿಳುವಳಿಕೆ ನೀಡುವುದಾಗಿದ್ದು ಆ.31 ರ ನಂತರ ಇ-ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವಾಸ್ತವ್ಯಕ್ಕೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ ಮಾಡಿಸಿ ಕೊಳ್ಳಬೇಕು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version