Published
4 months agoon
By
Akkare Newsಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿನಲ್ಲಿರೋದು ಎನ್ನಲಾದ ಫೋಟೋ ಇದೀಗ ವೈರಲ್ ಆಗಿದೆ.
ಈ ಫೋಟೋದಲ್ಲಿ ದರ್ಶನ್ ಜೈಲಿನ ಬ್ಯಾರಕ್‌ನಿಂದ ಹೊರಗೆ ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ವಿಗ್ ಇಲ್ಲದ ಲುಕ್‌ನಲ್ಲಿ ದರ್ಶನ್ ಕುಳಿತು ಮಾತನಾಡುತ್ತಿದ್ದಾರೆ.
ಫೋಟೋ ಬೆಳಕಿಗೆ ಬರುತ್ತಿದ್ದಂತೆ ಇದೇನು ಜೈಲಾ ಇಲ್ಲ ರೆಸಾರ್ಟಾ? ಅನ್ನೋ ಪ್ರಶ್ನೆ ಎದ್ದಿದೆ. ದರ್ಶನ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆದರೆ ದರ್ಶನ್ ಅಭಿಮಾನಿಗಳು ಎಂದಿನಂತೆ ಸಮರ್ಥಿಸಿಕೊಂಡಿದ್ದಾರೆ.