ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಎಂ.ಎ. ಪ್ರವೇಶಾತಿ ಆರಂಭ

Published

on

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ 2024-25 ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದ್ದು , ಆಸಕ್ತ ಪದವೀಧರರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

 

ತರಗತಿಗಳು ಸಾಯಂಕಾಲ ಗಂಟೆ 5 ರಿಂದ ನಡೆಯುತ್ತವೆ. ಉದ್ಯೋಗಸ್ಥರಿಗೆ ಹಾಗೂ ತುಳು ಭಾಷಾಭಿಮಾನಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಎಲ್ಲರೂ ತಮ್ಮ ಮಾತೃಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದಾಗಿದೆ.

ತುಳು ಎಂ.ಎ ಇತರ ಪಿಜಿ ಕೋರ್ಸ್ ಗಳಿಗೆ ಸಮಾನವಾದ ಸ್ನಾತಕೋತ್ತರ ಅಧ್ಯಯನವಾಗಿದ್ದು , ತುಳು ಭಾಷೆ, ಸಾಹಿತ್ಯ , ಜಾನಪದ, ಇತಿಹಾಸ , ಸಂಶೋಧನೆ ಬಗ್ಗೆ ಕಲಿಸಲಾಗುತ್ತದೆ. ಯಾವುದೇ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 6 ಕೊನೆಯ ದಿನವಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version