Published
4 months agoon
By
Akkare Newsನವದೆಹಲಿ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ನವದೆಹಲಿಯಲ್ಲಿಂದು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿಯಾದರು.
ಕರ್ನಾಟಕದ ವಿಧಾನಸಭೆಯ ಅಧ್ಯಕ್ಷರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಸದನವನ್ನು ಕ್ರಿಯಾತ್ಮಕವಾಗಿ ನಡೆಸಲು ತರುತ್ತಿರುವ ಸುಧಾರಣಾ ಕ್ರಮಗಳ ಕುರಿತು ಜಗದೀಪ್ ಧನ್ ಕರ್ ಅವರಿಗೆ ಸ್ಪೀಕರ್ ಮಾಹಿತಿ ನೀಡಿದರು.
ಅಲ್ಲದೇ, ಶಾಸಕರುಗಳಿಗೆ ಅಗತ್ಯವಿರುವ ಕೆಲವು ಸೌಲಭ್ಯಗಳನ್ನು ಒದಗಿಸಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಕೂಡಾ ಯು.ಟಿ. ಖಾದರ್ ಉಪರಾಷ್ಟ್ರಪತಿಗಳ ಜೊತೆ ಚರ್ಚೆ ನಡೆಸಿದರು.
ನವದಹೆಲಿ ಪ್ರವಾಸಲ್ಲಿರುವ ಯು.ಟಿ. ಖಾದರ್, ನಿನ್ನೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ಆಯೋಜನೆ ಮಾಡುವ ಕುರಿತು ಚರ್ಚೆ ನಡೆಸಿದ್ದರು.