ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಎಣ್ಮೂರಿನಲ್ಲಿ ದರ್ಶನ ಪಾತ್ರಿಗಳಾಗಿ ಸೇವೆ ಸಲ್ಲಿಸಲು ಪಡುಮಲೆಯಲ್ಲಿ ಪ್ರಸಾದ ಸ್ವೀಕರಿಸಿದ ರವೀಂದ್ರ ಹಾಗೂ ರಾಜೇಂದ್ರ ಪೂಜಾರಿ

Published

on

 

ಬಡಗನ್ನೂರು: ಪಡುಮಲೆ ಎರುಕೊಟ್ಯ ನಾಗ ಸಾನಿಧ್ಯದಲ್ಲಿ  ಸೆ.16ರಂದು ಶ್ರಾವಣ ಸಂಕ್ರಮಣ ಈ ಶುಭ ಸಮಾರಂಭದಲ್ಲಿ ಮಡಂತ್ಯಾರು ನವುಂಡ ಗರಡಿಯಲ್ಲಿ ದರ್ಶನ ಪಾತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಅವಳಿ ಪುತ್ರರಾದ ರವೀಂದ್ರ ಹಾಗೂ ರಾಜೇಂದ್ರ ಇವರು ಮುಂದೆ ಐತಿಹಾಸಿಕ ಇತಿಹಾಸ ಪ್ರಸಿದ್ಧ ಶ್ರೀ ನಾಗ ಬ್ರಹ್ಮ ಕೋಟಿ-ಚೆನ್ನಯ ಅದಿಗರಡಿ ಎಣ್ಮೂರಿನಲ್ಲಿ ದರ್ಶನ ಪಾತ್ರಿಗಳಾಗಿ ಸೇವೆ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ಪಡುಮಲೆ ಶ್ರೀ ಕೋಟಿ ಚೆನ್ನಯರ ಜನ್ಮಸ್ಥಳದಲ್ಲಿರುವ ಶ್ರೀ ನಾಗ ದೇವರು, ನಾಗ ಬಿರ್ಮ್ಮೆರ್ ಹಾಗೂ ದೇವಿ ದೈಯಿ ಬೈದೇತಿ ಸಾನಿಧ್ಯದಲ್ಲಿ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಕಲ್ಪದ ಪ್ರಕಾರ ವಿಶೇಷ ಪ್ರಾರ್ಥನೆ ಸಲ್ಲಿಸಿ,ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ  ಅರ್ಚಕ ಮಹಾಲಿಂಗ ಭಟ್ ಶ್ರೀ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅವಳಿ ಪಾತ್ರಗಳಿಗೆ ಮಲ್ಲಿಗೆ ಹೂವಿನ ಹಾರ ಹಾಕಿ ಪ್ರಸಾದ ನೀಡಿ ಆಶೀರ್ವದಿಸಿದರು.

 

 

 

 

ಬಾಲ್ಯದಿಂದ ಶ್ರೀ ಕ್ಷೇತ್ರ ನವುಂಡ ಗರಡಿಯಲ್ಲಿ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ರವೀಂದ್ರ ಹಾಗೂ ರಾಜೇಂದ್ರ ಪೂಜಾರಿರವರು ಪುಂಜಾಲಕಟ್ಟೆ ಮಾಲಾಡಿ ಗ್ರಾಮದ ಕೆಳಗಿನ ಪುರಿಯ ತಾವು ಮನೆ ವಿಶ್ವನಾಥ ಪೂಜಾರಿ ಮತ್ತು ಲೋಲಾವತಿ ದಂಪತಿಗಳ ಅವಳಿ ಪುತ್ರರು. ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ಹಾಲು ಹಾಗೂ ಸೀಯಾಳ ಅಭಿಷೇಕ ಮಾಡಲಾಯಿತು ಮತ್ತು ನಾಗದೇವರಿಗೆ ಹಾಗೂ ನಾಗಬಿರ್ಮೆರಿಗೆ ತಂಬಿಲ ಸೇವೆ ನಡೆಯಿತು.

 

ಮೂಡಬಿದಿರೆ ಸಾವಿರ ಕಂಬ ಬಸದಿಗೆ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ಪ್ರಸಾದ :-

ಮೂಡಬಿದಿರೆ ಸಾವಿರ ಕಂಬ ಬಸದಿಯ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳ ಪ್ರಸಾದ ಹೋಗಬೇಕು ಅನ್ನುವ ಬಸದಿ ಪೂಜ್ಜರ ಸಂಕಲ್ಪದ ಅನುಸಾರವಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಪದಾಧಿಕಾರಿಗಳು ಮತ್ತು ಊರಿನವರು ಭಾಗವಹಿಸಿದ್ದರು.

 

ಪಡುಮಲೆಗೆ ಪೂಜ್ಯರ ಆಗಮನ:-
ಪ್ರಸಾದ ಪೂಜ್ಯರ ಕೈ ಸೇರಿದಂತೆ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳದಲ್ಲಿ ಅ.6ರಂದು ನಡೆಯುವ ನವರಾತ್ರಿ ದೀಪೋತ್ಸವ ಸಂದರ್ಭದಲ್ಲಿ ಭೇಟಿ ನೀಡುವ ಭರವಸೆ  ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version