Published
3 months agoon
By
Akkare News
ಉತ್ತರಕನ್ನಡ ಅಂಕೋಲಾದ ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಸಮೇತ ನಾಪತ್ತೆಯಾಗಿದ್ದ ಕೇರಳ ಮೂಲದ ಚಾಲಕ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಸಹಿತ ಕೆಲ ವಾಹನಗಳು ಮುಳುಗಿದ್ದವು. ಇದರಲ್ಲಿ ಕೆಲ ವಾಹನಗಳ ಅವಶೇಷಗಳು ಪತ್ತೆಯಾಗಿದ್ದವು. ಆದರೆ ಅರ್ಜುನ್ ಹಾಗೂ ಲಾರಿಯ ಸುಳಿವು ಸಿಕ್ಕಿರಲಿಲ್ಲ. ಈ ಕಾರ್ಯಾಚರಣೆಗೆ ಈಶ್ವರ್ ಮಲ್ಪೆ ಸೇರಿದಂತೆ ಹಲವು ತಂಡ ಕಾರ್ಯಾಚರಣೆ ನಡೆಸಿದ್ದವು.