ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ ಮಾರುಕಟ್ಟೆಗೆ ಬಂದಿದೆ ಪ್ರತಿಷ್ಠಿತ ಕಂಪನಿಯ ಅಮೃತ್ “ಬೆಲ್ಲ ರಮ್ !!”

Published

on

ಎಣ್ಣೆ ಪ್ರಿಯರಿಗೆ ಸ್ಪೆಷಲ್ ಕಿಕ್ಕ್ ಏರಿಸಲು ಮಾರುಕಟ್ಟೆಗೆ ಬಂದಿದೆ ‘ಬೆಲ್ಲ’ ರಮ್. ಹೌದು, ಹುಲಿ ರಮ್ ಬೆನ್ನಲ್ಲೇ ಇದೀಗ ಬೆಲ್ಲ ರಮ್ ಬಂದಿದೆ. ಏನಿದರ ವಿಶೇಷತೆ ಇಲ್ಲಿದೆ ನೋಡಿ. ಸಾಮಾನ್ಯವಾಗಿ ಕಬ್ಬಿನಿಂದ ಮಾಡುವ ಉತ್ಪನ್ನ ಬೆಲ್ಲ ಎಲ್ಲರಿಗೂ ಇಷ್ಟ ಆಗುತ್ತೆ. ಮತ್ತು ಅರೋಗ್ಯಕ್ಕೂ ಒಳ್ಳೆಯದು. ಇನ್ಮುಂದೆ ಬೆಲ್ಲ ಬರೀ ಸಿಹಿ ಮಾತ್ರವೇ ಅಲ್ಲ. ಅದೀಗ ಪ್ರಖ್ಯಾತ ಎಣ್ಣೆ ಬ್ರ್ಯಾಂಡ್‌ ಕೂಡಾ ಹೌದು.

 

ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಡಿಸ್ಟಲ್ಲರಿ ಕಂಪನಿ ಅಮೃತ್‌ ಡಿಸ್ಟಲ್ಲರಿತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಣೆ ಸಲುವಾಗಿ ‘ಬೆಲ್ಲ’ ಎಂಬ ಹೆಸರಿನ ರಮ್ (Bella Rum) ಬಿಡುಗಡೆ ಮಾಡಿದೆ. ಇದು 100 ಪ್ರತಿಶತದಷ್ಟು ಬೆಲ್ಲದಿಂದ ಬಟ್ಟಿ ಇಳಿಸಿದ ಮತ್ತು ಪಕ್ವವಾದ ಸಿಂಗಲ್ ರಮ್ ಎಂದು ಹೇಳಲಾಗಿದೆ.

 

 

ಅದರಲ್ಲೂ ತನ್ನ ಹೊಸ ರಮ್‌ಗೆ ಅದು ಕನ್ನಡದ ‘ಬೆಲ್ಲ’ ಎನ್ನುವ ಹೆಸರನ್ನೇ ಇಟ್ಟಿದೆ. ಇಂಗ್ಲೀಷ್‌ನಲ್ಲಿ ಇದಕ್ಕೆ ಜಾಗರಿ ಎನ್ನಲಾಗುತ್ತದೆಯಾದರೂ, ಅಪ್ಪಟ ಕರ್ನಾಟಕದ ಬ್ರ್ಯಾಂಡ್‌ ಆಗಿರುವ ಕಾರಣಕ್ಕೆ ಅಮೃತ್‌ ಡಿಸ್ಟಲ್ಲರಿಸ್‌ ತನ್ನ ಹೊಸ ರಮ್‌ಗೆ ಕನ್ನಡದ ‘ಬೆಲ್ಲ’ ಎನ್ನುವ ಹೆಸರನ್ನಿಟ್ಟಿದೆ.

 

 

ಇದು ಕರ್ನಾಟಕ ಅಬಕಾರಿ ಇಲಾಖೆಯಿಂದ ಉತ್ಪಾದನಾ ಪರವಾನಗಿಯನ್ನು ಪಡೆದ ಮೊದಲ ರಮ್ ಆಗಿದ್ದು, ಇದರ ಬೆಲೆ 3,500 ರೂ. ಆರಂಭದಲ್ಲಿ USA ಮತ್ತು ಕರ್ನಾಟಕದಲ್ಲಿ ಮಾರಾಟ ಪ್ರಾರಂಭಿಸಲಾಗಿದ್ದು, ದಸರಾದ ವೇಳೆಗೆ ಭಾರತದ ಎಲ್ಲೆಡೆ ಲಭ್ಯವಾಗಲಿದೆ.

ಮುಖ್ಯವಾಗಿ ಸಹ್ಯಾದ್ರಿ ಶ್ರೇಣಿ ಮತ್ತು ಮಂಡ್ಯದ ಬೆಲ್ಲದಿಂದ ತಯಾರಿಸಲಾದ ಬೆಲ್ಲ ರಮ್ ಅನ್ನು ಉಷ್ಣವಲಯದ ಹವಾಮಾನ ಪರಿಸ್ಥಿತಿಗಳಲ್ಲಿ ಎಕ್ಸ್-ಬೋರ್ಬನ್ ಬ್ಯಾರೆಲ್‌ಗಳಲ್ಲಿ ಆರು ವರ್ಷಗಳ ಕಾಲ ಪಕ್ವಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version