Published
2 months agoon
By
Akkare Newsಪುತ್ತೂರು: ಬಡಗನ್ನೂರು ಗ್ರಾಮದ ಸಜಂಕಾಡಿ ಕಾಲನಿಯಲ್ಲಿ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರಾರ್ಥ ಸಭೆ ನಡೆಯಿತು.
ಸಭೆಯಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ ರೈ ಸಜಂಕಾಡಿ ಸ್ವಾಗತಿಸಿದರು. ಟ್ರಸ್ಟ್ ನ ಗೌರವ ಸಲಹೆಗಾರರಾದ ಮಹಮ್ಮದ್ ಬಡಗನ್ನೂರು ರವರು, ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಯವರ ಜನಮನ ಕಾರ್ಯಕ್ರಮದ ಎಲ್ಲಾ ವಿವರಗಳನ್ನು ಸಭೆಯಲ್ಲಿ ತಿಳಿಸಿ ಶಾಸಕರ ಪರವಾಗಿ ಎಲ್ಲರನ್ನೂ ಆಹ್ವಾನಿಸಿದರು.
ಸಭೆಯಲ್ಲಿ ಮುಖಂಡರಾದ ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಗೋಪಾಲ ಸಜಂಕಾಡಿ, ಲೋಕೇಶ್ ರೈ ಸಜಂಕಾಡಿ, ಬಟ್ಯ ಸಜಂಕಾಡಿ, ವಾಮನ ಮತ್ತು ಇತರರು ಉಪಸ್ಥಿತರಿದ್ದರು.