ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಹೆಚ್‌.ಎಸ್‌.ಆರ್‌.ಪಿ ನಂಬರ್‌ ಪ್ಲೇಟ್‌ ಅಳವಡಿಕೆ; ವಾಹನ ಮಾಲೀಕರಿಗೆ ಸಿಹಿ ಸುದ್ದಿ

Published

on

 ರಾಜ್ಯ ಸರಕಾರವು ವಾಹನ ಮಾಲೀಕರರ ವಾಹನಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಮೂರ್ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿತ್ತು. ಇದೀಗ ಇನ್ನೂ ಈ ಕೆಲಸ ಮಾಡದವರಿಗೆ ಇದೀಗ ರಾಜ್ಯ ಸರಕಾರ ಮತ್ತೊಂದು ಅವಕಾಶ ನೀಡಿದೆ. ಈ ತಿಂಗಳ ಕೊನೆ ಅಂದರೆ ನವೆಂಬರ್‌ 30 ರವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸಮಯ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.


1.90ಕೋಟಿ ಹಳೆ ವಾಹನಗಳ ಪೈಕಿ 55 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಲಾಗಿದ್ದು, ಇನ್ನೂ ಬಾಕಿ ವಾಹನಗಳ ಮಾಲೀಕರು ಅಳವಡಿಕೆ ಮಾಡಿಲ್ಲ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆ ಇದೀಗ ಇನ್ನೊಮ್ಮೆ ಅವಕಾಶ ನೀಡಿದೆ.

 

ಇದರ ಜೊತೆ ಯಾರೆಲ್ಲ ನವೆಂಬರ್‌ 30ರೊಳಗೆ ನಂಬರ್‌ ಪ್ಲೇಟ್‌ ಬದಲಾವಣೆ ಮಾಡಿಲ್ಲದಿದ್ದರೆ ಡಿ.1 ರಿಂದ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ.

 

 

 

ಹೆಚ್‌.ಎಸ್‌.ಆರ್‌.ಪಿ ಅಳವಡಿಕೆ ಮಾಡುವುದು ಹೇಗೆ?
ಮೊದಲಿಗೆ https://transport.karnataka.gov.in ಅಥವಾ www.siam.in ಭೇಟಿ ನೀಡಬೇಕು. ನಂತರ BOOK HSRP ನ್ನು ಕ್ಲಿಕ್‌ ಮಾಡಬೇಕು
ನಂತರ ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ
ನಂತರ ವಾಹನದ ವಿವರಗಳನ್ನು ಭರ್ತಿ ಮಾಡಿ
ಹೆಚ್‌.ಎಸ್‌.ಆರ್‌.ಪಿ ಡೀಲರ್‌ ಸ್ಥಳ ಆಯ್ಕೆ ಮಾಡಿ
ಹೆಚ್‌.ಎಸ್‌.ಆರ್‌.ಪಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು. ನಗದು ಶುಲ್ಕ ಪಾವತಿ ಇಲ್ಲ
ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು
ಹೆಚ್‌ಎಸ್‌ಆರ್ಪಿ ಅಳವಡಿಕೆಯ ದಿನಾಂಕ ಮತ್ತು ಸಮಯ ಆಯ್ಕೆ ಮಾಡಿ
ವಾಹನದ ಡೀಲರ್‌ ಸಂಖ್ಯೆಗೆ ಭೇಟಿ ನೀಡಿ
ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗೆ ಆಯ್ಕೆ ಮಾಡಿ

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version