Published
5 days agoon
By
Akkare News
ಶ್ರೀ ಗೆಜ್ಜೆಗಿರಿ ಮೇಳದ ಮೂರನೇ ವರ್ಷದ ತಿರುಗಾಟದ ದೇವರ ಪ್ರಥಮ ಸೇವೆಯಾಟವು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದಿನಾಂಕ 22-11-2024 ನೇ ಶುಕ್ರವಾರ ಬೆಳಗ್ಗೆ 7:30 ಕ್ಕೆ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ , ಗುರುಪೂಜೆ, ದ್ವಾದಶ ನಾರಿಕೇಳ ಗಣಯಾಗ, ನಂತರ ಸಾನಿಧ್ಯದಲ್ಲಿ ಪರ್ವಸೇವೆ
ಮಧ್ಯಾಹ್ನ 12:30ಕ್ಕೆ ಮಹಾಪೂಜೆ
ಅನ್ನಸಂತರ್ಪಣೆ
ಸಂಜೆ 5:40ಕ್ಕೆ ಗೆಜ್ಜೆಮೂರ್ತ
ನಂತರ ಚೌಕಿ ಪೂಜೆ 6:30ರಿಂದ ಪ್ರಥಮ ದೇವರ ಸೇವೆಯಾಟ
ಪ್ರಸಂಗ:- “ಅಶ್ವಮೇಧ”
ನಂತರ ರಾತ್ರಿ 8:30 ರಿಂದ ಪ್ರಾಯೋಗಿಕವಾಗಿ.. ಖ್ಯಾತ ಪ್ರಸಂಗಕರ್ತರಾದ ದೇವದಾಸ್ ಈಶ್ವರಮಂಗಲರ 94ನೇ ರಂಗಪಠ್ಯ ಕ್ಷಣ ಕ್ಷಣ ಕುತೂಹಲ, ಇನ್ನಷ್ಟು ರೋಮಾಂಚನ, ಮತ್ತಷ್ಟು ವಿಶೇಷತೆ, ಮಗದಷ್ಟು ತಿರುವುಗಳೊಂದಿಗೆ ಪ್ರೇಕ್ಷಕರನ್ನು ಯಕ್ಷ ಲೋಕಕ್ಕೆ ಕೊಂಡೊಯ್ಯಬಲ್ಲ ವಿನೂತನ ಶೈಲಿಯ ಹಾಸ್ಯಮಯ-ಸಾಮಾಜಿಕ “ಕಾಲ ಕಲ್ಜಿಗ” ಸತ್ಯ ತೆರಿನಗ? ಎಂಬ ಹಿಂದೆಂದೂ ಕಂಡಿರದ ಅಪರೂಪದ ಪ್ರಸಂಗವನ್ನು ಆಡಿ ತೋರಿಸಲಿದ್ದೇವೆ.
ಸರ್ವರಿಗೂ ಆದರದ ಸ್ವಾಗತ