Published
2 months agoon
By
Akkare Newsಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತು. ನಂತರ ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾದೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕರಿಯ ಎಂದು ಜಮೀರ್ ಅಹ್ಮದ್ ನಿಂದಿಸಿದ್ದರು. ಈ ಹಿನ್ನೆಲೆ ‘ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಕರಿಯ ಎಂದು ಕರೆದರೆ ನೀನು ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಗಡಿ ದಾಟುವುದಿಲ್ಲ. ನಾನೇ ನಿನಗೆ ಕೊನೆಯಾಡುತ್ತೇನೆ’ ಎಂದು ಸಚಿವ ಜಮೀರ್ ಅವರಿಗೆ ಪುನೀತ್ ಕೆರೆಹಳ್ಳಿ ಜೀವ ಬೆದರಿಕೆ ಹಾಕಿದ್ದರು.
ಇನ್ನು ಈ ಸಂಬಂಧ ಸಚಿವರ ಆಪ್ತ ಸಹಾಯ ಬಿ.ಎಸ್.ಅಶೋಕ್ ಅವರು ದೂರು ನೀಡಿದ್ದರು. ದೂರಿನ ಮೇರೆಗೆ ಪುನೀತ್ ಕೆರೆ ಹಳ್ಳಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿಧನರಾದ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ಅವರ ಅಂಗಾಂಗಳನ್ನು ಆಸ್ಪತ್ರೆಯಲ್ಲಿ ವಿವಿಧ ಸ್ವೀಕೃತದಾರರಿಗೆ ರವಾನಿಸಲಾಗಿದೆ. ಮೃ*ತರ ಕುಟುಂಬದ ಒಪ್ಪಿಗೆಯಂತೆ ಅಂಗಾಂಗ ದಾನ ಮಾಡಲಾಯಿತು.