ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಪುತ್ತೂರು: ಸಿಡಿಲು ಬಡಿದು ಬಾಲಕ ಮೃತ್ಯು

Published

on

ಪುತ್ತೂರು: ಕೆದಿಲ ಪೇರಮುಗೇರು  ನಿವಾಸಿ ಶ್ರೀ ರಾಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸುಬೋದ್ (13) ಇಂದು ಸಂಜೆ ಬಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿತ್ತು ಈ ಸಂದರ್ಭ ಸಿಡಿಲು ಬಡಿದು ಈ ಬಾಲಕ ಸಾವನ್ನಪ್ಪಿದ್ದಾನೆ.

 

ಸಂಜೆ 5 ಗಂಟೆ ಸುಮಾರಿಗೆ ಕೆದಿಲ ಗ್ರಾಮದ ಗಡಿಯಾರ ನಿವಾಸಿ ಸುಭೋದ್ ಸಿ (14) ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದ ಕೂಡಲೇ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿಸಲಾಯಿತು.

 

ಸುಭೋದ್ ಎಂಬಾತ ಮನೆಯಂಗಳದಲ್ಲಿ ಇದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಕೊಂಡೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version