Published
1 month agoon
By
Akkare Newsಪುತ್ತೂರು: ಸಿಮೆಂಟ್ ಸಾರಣೆ ಕೆಲಸದ ವೇಳೆ ಮೃತಪಟ್ಟ ಕೂಲಿ ಕಾರ್ಮಿಕನ ಮೃತದೇಹವನ್ನು ಪಿಕಪ್ ವಾಹನದ ಮೂಲಕ ತಂದು ಮೃತ ವ್ಯಕ್ತಿಯ ಮನೆ ಸಮೀಪ ರಸ್ತೆಯ ಮಲಗಿಸಿ ಹೋದ ಘಟನೆ ಚಿಕ್ಕಮೂಡ್ನೂರು ಗ್ರಾಮದ ಸಾಲ್ಮರದ ಕೆರೆ ಮೂಲೆಯಲ್ಲಿ ಇಂದು (ನ.16) ನಡೆದಿದ್ದು, ಸ್ಥಳೀಯರು ಕಾಮಗಾರಿ ನಡೆಸುತ್ತಿದ್ದ ಮಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
70 ವರ್ಷದ ಶಿವಪ್ಪ ಎಂಬ ಕೂಲಿ ಕಾರ್ಮಿಕ, ಸಾಲ್ಮರ ಕೆರೆಮೂಲೆ ನಿವಾಸಿ ಸಿಮೆಂಟ್ ಸಾರಣೆ ಮೇಸ್ತ್ರಿಯೊಂದಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ವೇಳೆ ಮೃತ ಪಟ್ಟಿದ್ದಾರೆ. ಮೃತದೇಹವನ್ನು ಪಿಕಪ್ ನಲ್ಲಿ ಸಾಗಿಸಿ ಮೃತ ವ್ಯಕ್ತಿಯ ಮನೆಮುಂದೆ ಬಿಟ್ಟು ತೆರಳಲಾಗಿದೆ. ಈ ಘಟನೆ ಮೃತ ವ್ಯಕ್ತಿಯ ಮನೆ ಮಂದಿ ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಶಿವಪ್ಪ ಪತ್ನಿ ಸೇರಿದಂತೆ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.