ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಹರಿಯಾಣ ವಿಧಾನಸಭೆ ಕಟ್ಟಡಕ್ಕೆ ಒಂದಿಚು ಭೂಮಿ ಕೊಡಲ್ಲ: ಪಂಜಾಬ್ ಎಎಪಿ

Published

on

ಹರಿಯಾಣದ ವಿಧಾನಸಭೆ ಕಟ್ಟವನ್ನು ಚಂಡೀಗಢದಲ್ಲಿ ನಿರ್ಮಿಸಲು ಹರಿಯಾಣಕ್ಕೆ ಯಾವುದೇ ಭೂಮಿಯನ್ನು ನೀಡಬಾರದು ಎಂದು ಆಮ್ ಆದ್ಮಿ ಪಕ್ಷವು ಶುಕ್ರವಾರ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರಿಗೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ರಾಜ್ಯಪಾಲ ಕಟಾರಿಯಾ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ನಿರ್ವಾಹಕರಾಗಿದ್ದು, ಈ ಪ್ರದೇಶವು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳೆರಡರ ಸಾಮಾನ್ಯ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ.

 

“ಚಂಡೀಗಢವು ಪಂಜಾಬ್‌ಗೆ ಸೇರಿದ್ದು, ನಾವು ಒಂದು ಇಂಚು ಭೂಮಿಯನ್ನು ಸಹ ನೀಡಲು ಹೋಗುವುದಿಲ್ಲ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಪಂಜಾಬ್ ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು, ತಮ್ಮ ಪಕ್ಷದ ನಿಯೋಗವು ರಾಜ್ಯಪಾಲ ಕಟಾರಿಯಾ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ. ಚಂಡೀಗಢದ ಮೇಲೆ ಪಂಜಾಬ್‌ಗೆ ಹಕ್ಕಿದೆ ಮತ್ತು ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

 

ಪಂಜಾಬ್ ಆಮ್ ಆದ್ಮಿ ಪಕ್ಷದ ಆಡಳಿತದಲ್ಲಿದ್ದರೆ, ಹರಿಯಾಣದಲ್ಲಿ ಬಿಜೆಪಿ ಆಡಳಿತವಿದೆ. ಪ್ರಸ್ತುತ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಪ್ರತ್ಯೇಕ ವಿಧಾನಸಭೆಗಳು ಚಂಡೀಗಢದ ಒಂದೇ ಕಟ್ಟಡ ಸಂಕೀರ್ಣದಲ್ಲಿವೆ.

ಚಂಡೀಗಢದಲ್ಲಿ 10 ಎಕರೆ ಭೂಮಿಯನ್ನು ಹರಿಯಾಣಕ್ಕೆ ಅಸೆಂಬ್ಲಿ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರವು ಮಂಜೂರು ಮಾಡಿದ ನಂತರ ಶುಕ್ರವಾರ ಚೀಮಾ ಅವರ ಹೇಳಿಕೆ ನೀಡಿದ್ದಾರೆ. ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷಗಳು ಈ ನಿರ್ಧಾರವನ್ನು ಟೀಕಿಸಿವೆ.

 

“ನಾವು ರಾಜ್ಯಪಾಲರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ” ಎಂದು ಚೀಮಾ ತಿಳಿಸಿದ್ದು, ಹರ್ಯಾಣಕ್ಕೆ ಚಂಡೀಗಢದಲ್ಲಿ ಯಾವುದೇ ಭೂಮಿಯನ್ನು ಮಂಜೂರು ಮಾಡಬಾರದು ಎಂದು ನಾವು ಹೇಳಿದ್ದೇವೆ ಎಂದು ಅವರು ಹೇಳಿದ್ದಾರೆ. ಹರ್ಯಾಣವನ್ನು ಪ್ರತ್ಯೇಕ ರಾಜ್ಯವಾಗಿ ರಚಿಸಿದಾಗ ಅದರ ರಾಜಧಾನಿ ಮತ್ತು ವಿಧಾನಸಭೆಯನ್ನು ಮಾಡುವುದಾಗಿ ಸ್ಪಷ್ಟಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 1966 ರಲ್ಲಿ ಹರಿಯಾಣವನ್ನು ಪ್ರತ್ಯೇಕ ರಾಜ್ಯವಾಗಿ ರಚನೆ ಮಾಡಲಾಯಿತು.

 

“ಆರು ದಶಕಗಳಿಂದ, ಹರಿಯಾಣವು ತನ್ನ ರಾಜಧಾನಿಯನ್ನು ಹೊಂದಲು ಅಥವಾ ರಾಜ್ಯದಲ್ಲಿ ಅದರ ವಿಧಾನಸಭೆಯನ್ನು ನಿರ್ಮಿಸಲು ವಿಫಲವಾಗಿದೆ. ಈಗ ಅವರು ಪಂಜಾಬ್‌ನ ರಾಜಧಾನಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ” ಎಂದು ಸಚಿವ ಚೀಮಾ ಅವರು ಹೇಳಿದ್ದಾರೆ. ಹರಿಯಾಣವು ಪಂಚಕುಲದಲ್ಲಿ ತನ್ನ ರಾಜಧಾನಿಯನ್ನು ಏಕೆ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

“ಪಂಚಕುಲ ಪ್ರದೇಶವು ಚಂಡೀಗಢದಲ್ಲಿ ಅವರು ವಿಧಾನಸಭಾ ಕಟ್ಟಡಕ್ಕಾಗಿ ಭೂಮಿಯನ್ನು ಹುಡುಕುತ್ತಿರುವ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ” ಎಂದು ಅವರು ಹೇಳಿದ್ದಾರೆ.

 

 

ಶುಕ್ರವಾರ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ, ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಅವರು ಆಮ್ ಆದ್ಮಿ ಪಕ್ಷವನ್ನು ಟೀಕಿಸಿದ್ದು, “ಕೊಳಕು ರಾಜಕೀಯ”ದಲ್ಲಿ  ಪಾಲ್ಗೊಳ್ಳದಂತೆ ಕೇಳಿಕೊಂಡಿದ್ದಾರೆ. “ಚಂಡೀಗಢ ಹರಿಯಾಣ ಮತ್ತು ಪಂಜಾಬ್‌ನ ಭಾಗವಾಗಿದೆ” ಎಂದು ಪ್ರತಿಪಾದಿಸಿದ ಸೈನಿ, “ಹರ್ಯಾಣ ರಾಜ್ಯವು ಪಂಜಾಬ್‌ನ ಕಿರಿಯ ಸಹೋದರ ಎಂದು ನಾನು ಪಂಜಾಬ್‌ನ ನಾಯಕರಿಗೆ ಹೇಳಲು ಬಯಸುತ್ತೇನೆ. ಅವರು ಸಹೋದರತ್ವವನ್ನು ಏಕೆ ಹಾಳು ಮಾಡುತ್ತಿದ್ದಾರೆ? ಚಂಡೀಗಢದ ಮೇಲೆ ನಮಗೆ ಹಕ್ಕಿದೆ” ಎಂದು ಅವರು ಹೇಳಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version