Published
1 month agoon
By
Akkare Newsಪುತ್ತೂರು: ಫರ್ನಿಚರ್ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿಡೀರನೇ ಮೃತಪಟ್ಟ ಸಾಲ್ಮರ ಕೆರೆಮೂಲೆ ನಿವಾಸಿ ಶಿವಪ್ಪ ರವರ ಮನೆಗೆ ಭೇಟಿ ನೀಡಿದ ಶಾಸಕರು ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
ಕೆರೆಮೂಲೆ ನಿವಾಸಿ ಶಿವಪ್ಪರವರು ಸಾಲ್ಮರದ ಫರ್ನಿಚರ್ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.ಶನಿವಾರ ಕೆಲಸ ಮಾಡುತ್ತಿದ್ದ ವೇಳೆ ದಿಡೀರನೇ ಮೃತಪಟ್ಟಿದ್ದರು. ಮೃತದೇಹವನ್ನು ಫರ್ನಿಚರ್ ಮಾಲಿಒಕ ಪಿಕಪ್‌ನಲ್ಲಿ ಹಾಕಿ ಶಿವಪ್ಪ ಅವರ ಮನೆಯ ಮುಂದೆ ರಸ್ತೆ ಬದಿಯಲ್ಲಿ ಹಾಕಿ ತೆರಳಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಪ್ಪ ಕುಟುಂಬಸ್ಥರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.
ಫರ್ನಿಚರ್ ಮಾಲಿಕನ ಅಮಾನವೀಯತೆಯ ವಿರುದ್ದ ಶಿವಪ್ಪ ಅವರ ಕುಟುಂಬಸ್ಥರು ಮಾತ್ರವಲ್ಲದೆ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪ್ರಕರಣವನ್ನು ತನಿಖೆಗೆ ಆಗ್ರಹಿಸಿ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದವು. ಶನಿವಾರ ತಡ ರಾತ್ರಿ ವರೆಗೆ ಸಂಘಟನೆಗಳ ಮಂದಿ ಆಕ್ರೋಶ ವ್ಯಕ್ತಪಡಿಸಿ ಪುತ್ತೂರು ಸರಕಾರಿ ಆಸ್ಪತ್ರೆ ಹಾಗೂ ನಗರ ಠಾಣೆಯ ಮುಂದೆ ಜಮಾಯಿಸಿದ್ದರು.
ಫರ್ನಿಚರ್ ಮಿಲ್‌ನಲ್ಲೂ ಆಕ್ರೋಶ
ಭಾನುವಾರ ಬೆಳಿಗ್ಗೆ ಸಂಘಟನೆಯ ಕಾರ್ಯಕರ್ತರು ಹಾಗೂ ಶಿವಪ್ಪ ಅವರ ಕುಟುಂಬಸ್ಥರು ಅವರು ಮೃತಪಟ್ಟಿದ್ದ ಮಿಲ್ ಬಳಿ ತೆರಳಿ ಅಲ್ಲಿ ಮಿಲ್ ನ ಮಾಲಿಕನಿಗಾಗಿ ಹುಡುಕಾಟ ನಡೆಸಿ ಮಾಲಿಕನ ಬಂಧನಕ್ಕೆ ಆಗ್ರಹಿಸಿ ಧಿಕ್ಕಾರವನ್ನು ಕೂಗಿದ್ದರು. ಮೃತದೇಹವನ್ನು ಪಿಕಪ್‌ನಲ್ಲಿ ತಂದು ರಸ್ತೆ ಬದಿ ಹಾಕಿ ಹೋದ ಅಮಾನವೀಯತೆಯನ್ನು ತೋರಿದ ಮಾಲಿಕನನ್ನು ಕೂಡಲೇ ಬಂಧಿಸಬೇಕು ಎಂದು ಅಲ್ಲಿ ಸೇರಿದ ನೂರಾರು ಮಂದಿ ಆಗ್ರಹಿಸಿದ್ದರು.
ಘಟನಾ ಸ್ಥಳಕ್ಕೆ ಶಾಸಕರ ಭೇಟಿ
ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರಐ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫರ್ನಿಚರ್ ಮಾಲಿಕರು ಮಾಡಿದ ಕೃತ್ಯ ಘೋರವಾದದ್ದು ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಜೀವಕ್ಕೆ ಬೆಲೆ ಕೊಡದ ಇವರ ವಿರುದ್ದ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದಲ್ಲದೆ ಮಿಲ್‌ಗೆ ಬೀಗ ಜಡಿಯುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದರು. ಅಲ್ಲಿ ಸೇರಿದ್ದ ನೂರಾರು ಮಂದಿ ಶಾಸಕರಲ್ಲಿ ವಿಚಾರವನ್ನು ತಿಳಿಸಿದರು.
ಮೃತರ ಅಂತಮ ದರ್ಶನ
ಬಳಿಕ ಶಾಸಕರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ನಡೆದರು.
ಬಡವನಾಗಲಿ, ಶ್ರೀಮಂತನೇ ಆಗಲಿ ಜೀವ ಜೀವವೇ , ಈ ಸಾವಿಗೆ ನ್ಯಾಯ ಕೊಡಿಸುವೆ
ಮೃತರ ಅಂತಿಮ ದರ್ಶನದ ವೇಳೆ ಶಾಸಕರ ಬಳಿ ಬಂದ ಮೃತರ ಪತ್ನಿ ಮಕ್ಕಳು ನಮಗೆ ನ್ಯಾಯ ಕೊಡಿಸಿ ಶಾಸಕರೇ ಎಂದು ಮನವಿ ಮಾಡಿದರು. ಈ ವೇಳೆಮಾತನಾಡಿದ ಶಾಸಕರು ಬಡವನಾಗಲಿ ಶ್ರೀಮಂತನಾಗಲಿ ಜೀವ ಜೀವವೇ ಈ ಸಾವಿಗೆ ನಾನು ನ್ಯಾಯ ಕೊಡಿಸುವೆ. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೃತಪಟ್ಟಾಗ ಅವರನ್ನು ಆಸ್ಪತ್ರೆಗೆ ಕೊಂಡು ಹೋಗುವುದನ್ನು ಬಿಟ್ಟು ಮೃತದೇಹವನ್ನು ಪಿಕಪ್‌ನಲ್ಲಿ ತಂದು ರಸ್ತೆ ಬದಿಯಲ್ಲಿ ಹಾಕಿ ಹೋಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಫರ್ನಿಚರ್ ಮಾಲಕ ಮಾಡಿರುವ ದೊಡ್ಡ ಅನ್ಯಾಯ. ಜೀವಕ್ಕೆ ಬೆಲೆ ಕೊಡದ ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ. ಈಗಾಗಲೇ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಂಡಿತವಾಗಿಯೂ ನಾನು ಸಂತೃಸ್ತ ಕುಟುಂಬದ ಪರವಾಗಿದ್ದೇನೆ, ಈ ಸಾವಿಗೆ ನ್ಯಾಯ ಕೊಡಿಸುವೆ ಎಂದು ಹೇಳಿದರು.