Published
1 month agoon
By
Akkare Newsಜಾರ್ಖಂಡ್‌ನಲ್ಲಿ ದುರುದ್ದೇಶಪೂರಿತ ಅಪ್ರಚಾರಕ್ಕಾಗಿ ಬಿಜೆಪಿ 500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಗಳವಾರ ಆರೋಪಿಸಿದ್ದಾರೆ. ಜನರ ನಡುವೆ ದ್ವೇಷ ಹುಟ್ಟುಹಾಕಿ ಆ ಮೂಲಕ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸುವಲ್ಲಿ ಬಿಜೆಪಿ ನಿಪುಣತೆಯನ್ನು ಹೊಂದಿದೆ ಎಂದು ಸೋರೆನ್ ಆರೋಪಿಸಿದ್ದು, ಆದರೆ ಜಾರ್ಖಂಡ್‌ನ ಸಂಸ್ಕೃತಿಯು ಇಂತಹ “ದುರುದ್ದೇಶಪೂರಿತ ಅಪ್ರಚಾರಗಳನ್ನು” ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ದ್ವೇಷ ಭಾವನೆಗಳನ್ನು ಹುಟ್ಟುಹಾಕುವ ಮೂಲಕ ನಾಯಕರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವುದು ತುಂಬಾ ಸುಲಭವಾದ ವಿಚಾರವಾಗಿದೆ. ಈ ರೀತಿಯ ಪ್ರಚಾರ ಅಭಿಯಾನವು ಅತ್ಯಂತ ಸುಲಭವಾಗಿದ್ದು, ಅದರಲ್ಲಿ ಬಿಜೆಪಿ ಪರಿಣತ. ಆದರೆ ನಾನು ಜಾರ್ಖಂಡ್‌ನವನು, ನಮ್ಮ ಸಂಸ್ಕೃತಿ ಇದಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಎಂದಿಗೂ ಮಾಡಬೇಡಿ” ಎಂದು X ನ ಪೋಸ್ಟ್‌ನಲ್ಲಿ ಸೊರೆನ್ ಹೇಳಿದ್ದಾರೆ.
“ಒಂದು ಅಂದಾಜಿನ ಪ್ರಕಾರ, ನನ್ನ ವಿರುದ್ಧ ದ್ವೇಷ ಪ್ರಚಾರಕ್ಕಾಗಿ ಬಿಜೆಪಿ 500 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ” ಎಂದು ಅವರು ಆರೋಪಿಸಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡಲು ಬಿಹಾರ, ಛತ್ತೀಸ್‌ಗಢ, ಒಡಿಶಾ ಮತ್ತು ಬಂಗಾಳದಿಂದ ಬಿಜೆಪಿ ಜನರನ್ನು ಕರೆತಂದಿದೆ. ಅವರ ಮೂಲಕ ಚುನಾವಣಾ ವೇಳೆ ಮತದಾರರಲ್ಲಿ ಬಿಜೆಪಿ ಭಯ ಹುಟ್ಟುಹಾಕಿದೆ ಎಂದು ಸೋರೆನ್ ಆರೋಪಿಸಿದ್ದಾರೆ.
ಬಿಹಾರ, ಛತ್ತೀಸ್‌ಗಢ, ಒಡಿಶಾ, ಬಂಗಾಳದ ಜನರು ಚುನಾವಣೆ ನಡೆಯುವ ಕ್ಷೇತ್ರಗಳ ರಸ್ತೆ, ಸಂದಿಗಳಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಇದು ಬಿಜೆಪಿಯ ಹೊಸ ಗಿಮಿಕ್, ಇದನ್ನು ಪಿಸುಮಾತು ಪ್ರಚಾರ ಎಂದು ಕರೆಯಲಾಗುತ್ತದೆ. ಇದಕ್ಕಾಗಿ 1 ಕೋಟಿ ರೂ. ಪ್ರತಿ ಕ್ಷೇತ್ರದಲ್ಲಿ ಖರ್ಚು ಮಾಡಿದ್ದು, ಅವರು ಬಂದು ತಮ್ಮ ಕೆಲಸದ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಅವರು ನಿಮ್ಮನ್ನು ಸುಳ್ಳಿನ ಮೂಲಕ ಹೆದರಿಸುತ್ತಾರೆ ಎಂದು ಸೋರೆನ್ ಆಪಾದಿತ ಪ್ರಚಾರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ನಾವು ಚುನಾವಣಾ ಬಾಂಡ್‌ಗಳು, ನಕಲಿ ಔಷಧಿಗಳು ಅಥವಾ ನಕಲಿ ಲಸಿಕೆಗಳ ಮೂಲಕ ದೇಶದ ಜನರ ಜೀವನದ ಜೊತೆ ಆಟವಾಡುವ ಮೂಲಕ ದೇಣಿಗೆ ಸಂಗ್ರಹಿಸಿಲ್ಲ. ಆದ್ದರಿಂದ, ಜಾರ್ಖಂಡ್ ನಿವಾಸಿಗಳಾದ ನೀವೆಲ್ಲರೂ ಇಂದು ಮತ್ತು ನಾಳೆ ನನ್ನ ಪರವಾಗಿ ಬಹಿರಂಗವಾಗಿ ಪ್ರಚಾರ ಮಾಡುವಂತೆ ನಾನು ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.