Published
4 months agoon
By
Akkare News ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಪತ್ತೆಯಾಗಿರುವ ಆರೋಪಿ ಬೆಳ್ತಂಗಡಿ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷದ್ (27) ಮನೆಗೆ ಎನ್‌ಐಎ ತಂಡ ದಾಳಿ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಎನ್‌ಐಎ ನೌಷದ್ ಪತ್ತೆಗೆ ಎರಡು ಲಕ್ಷ ರಿವಾರ್ಡ್ ಘೋಷಣೆ ಮಾಡಿದ್ದು, ಬೆಳ್ತಂಗಡಿ ಪೊಲೀಸರು ಎನ್‌ಐಎ ಅಧಿಕಾರಿಗಳಿಗೆ ಸಾಥ್ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.