Published
1 week agoon
By
Akkare Newsಬೆಳ್ತಂಗಡಿ: ಹಿಟಾಚಿ ಬಳಸಿ ಮಿತ್ತಬಾಗಿಲಿನ ಪರಾರಿ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ಗ್ರಾಮಸ್ಥರೇ ಸೇರಿ ಅಟ್ಟಾಡಿಸಿ ಓಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಪರಾರಿಗೆ ಆಗಮಿಸಿದ್ದ ಸಮೀರ್ ಕಕ್ಕಿಂಜೆ ಎಂಬಾತ ಹಿಟಾಚಿ ಹಾಗೂ ಟಿಪ್ಪರ್ ಬಳಸಿ ಮರಳು ಸಂಗ್ರಹಿಸಲು ಆರಂಭಿಸಿದ್ದಾರೆ. ಈ ವೇಳೆ ಸ್ಥಳೀಯರು ಸಮೀರ್ ಕಕ್ಕಿಂಜೆ ಎಂಬಾತನನ್ನು ಪ್ರಶ್ನಿಸಿದ್ದು, ತಾನು ಪೊಲೀಸರು ಹಾಗೂ ತಹಶೀಲ್ದಾರರಿಗೆ ಮಾಮೂಲು ಕೊಡುತ್ತಿರುವುದಾಗಿ ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಸಮೀರ್ ಸಹಿತ ಕಾರ್ಮಿಕರನ್ನು ಅಟ್ಟಾಡಿಸಿದ್ದು ಈ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ತಂಡವು ದಿಕ್ಕಾಪಾಲಾಗಿ ಓಟಕ್ಕಿತ್ತಿದೆ ಎಂದು ಸ್ಥಳೀಯರು ‘ ತಿಳಿಸಿದ್ದಾರೆ.