ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

“ಹವ್ಯಕ ಕೃಷಿ ರತ್ನ” ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ

Published

on

ಪೆರ್ನಾಜೆ:ಬೆಂಗಳೂರು ಅರಮನೆ ಮೈದಾನದಲ್ಲಿ ಡಿ .27ರಿಂದ 29 ರವರೆಗೆ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ “ಹವ್ಯಕ ಕೃಷಿ ರತ್ನ” ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆಯಾಗಿರುತ್ತಾರೆ. ಈ ಪ್ರತಿಷ್ಠಿತ ಪ್ರಶಸ್ತಿಯು ಡಿ. 27ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಚಾಲಕರಾದ ಗಣೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಶಸ್ತಿಗೆ ವಿಶ್ವದಲ್ಲೇ ಪ್ರಪ್ರಥಮವಾಗಿ ಮಹಿಳಾ ಜೇನುಗಡ್ಡದಾರಿ ಜೇನು ಕೃಷಿ ವಿಶಿಷ್ಟ ಬರಹಗಳು ಕಲಾ ಪ್ರಿಯರು ಕಲಾ ಪೋಷಕರಾಗಿ ಆಕಾಶವಾಣಿಯಲ್ಲಿ ಹಾಡುಗಳನ್ನು ಆಲಿಸುವುದು ಮತ್ತು ಹಾಡುಗಳನ್ನು ಸುಶ್ರಾವ್ಯವಾಗಿ ಗುನುಗುವುದು ಅಲ್ಲದೆ ಸುಂದರ ಕೈಬರಹ ವೈವಿಧ್ಯಮಯ ತಿಂಡಿಗಳು ಸ್ವಾದಿಷ್ಟ ರುಚಿಕರ ಆಹಾರದ ಬರಹವು ಇವರ ವಿಶೇಷತೆ.

ಕಲಾ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆಯವರ ಪತ್ನಿ ನಂದನ್ ಕುಮಾರ್ , ಚಂದನ್ ಕುಮಾರ್ ಮಕ್ಕಳು ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನು ಗೂಡನ್ನು ನೋಡಿ ಹೇಗೆ ಬದುಕಬಹುದು ಎನ್ನುವ ಸೌಮ್ಯ ಪೆರ್ನಾಜೆ ನಮ್ಮಲ್ಲಿ ಸಹನೆ ತಾಳ್ಮೆ ಇದ್ದರೆ ಒಂದು ಅಬೂತ

ಪೂರ್ವ ಕಲ್ಪನೆ ಇಂದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತದೆ ಜೇನು ಕುಟುಂಬವನ್ನು ನೋಡಿ ತಿಳಿಯುವುದು ಬಹಳಷ್ಟು ಇದೆ ಎನ್ನುವ ಇವರಿಗೆ ಈಗಾಗಲೇ ಗಡಿನಾಡ ದ್ವನಿ, “ಮಧುಭೂಷಣ” ರಾಜ್ಯ ಪ್ರಶಸ್ತಿ , ಈಶ್ವರಮಂಗಲದಲ್ಲಿ ನಡೆದ ಗ್ರಾಮ ಗ್ರಾಮ ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ, ವಿಟ್ಲ “ಸ್ವರ ಸಿಂಚನ” ಸಂಗೀತೋತ್ಸವ 2024ರಲ್ಲೂ ಗೌರವಿಸಲಾಯಿತು. ಇವರು ಪಟಿಕ್ಕಲ್ಲು ರಾಮಚಂದ್ರ ಭಟ್ ಮತ್ತು ದೇವಕಿ ದಂಪತಿಯವರ ಪುತ್ರಿ. ಕೃಷಿ ಕ್ಷೇತ್ರದಲ್ಲಿನ ಶ್ರೀಮತಿಯ ಸಾಧನೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಕೃಷಿ ರತ್ನ ಎಂಬ ಪುರಸ್ಕಾರವನ್ನು ಪ್ರಧಾನ ಮಾಡಲಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version