Published
1 day agoon
By
Akkare Newsಪುತ್ತೂರು: ರಾಜ್ಯದಲ್ಲಿ ಗ್ಯಾರೆಂಟಿ ಹೇಗೆ ಅನುಷ್ಠಾನಗೊಂಡಿದೆಯೊ ವಿವಿಧ ಅಭಿವೃದ್ಧಿ ಕಾಮಗಾರಿಯಲ್ಲೂ ರಾಜಕೀಯ ಮಾಡಿಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್ ಅವರು ಹೇಳಿದರು.
ಡಿ.21ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬಿಪಿಹೆಚ್ ಲ್ಯಾಬ್ ಕಟ್ಟಡ ಸಹಿತ ವಿವಿ ಉಪಕೇಂದ್ರಗಳ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕಾರ್ಮಿಕ ಇಲಾಖೆಯ ನೋಂದಾಯಿತ ಕಟ್ಟಡ ಕಾರ್ಮಿಕರ ಟೂಲ್ ಕಿಟ್ ವಿತರಿಸಿ ಅವರು ಮಾತನಾಡಿದರು. ಪ್ರಚಾರ, ರಾಜಕೀಯ ಒಂದು ಕಡೆ, ಕೆಲಸ ಮುಖ್ಯ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಲ್ಲ. ಪುತ್ತೂರಿನಲ್ಲಿ ಹಲವಾರು ಅಭಿವೃದ್ದಿ ಕಾರ್ಯ ನಡೆಯಲಿದೆ. ರೈಯವರು ಬಹಳ ಆಸಕ್ತಿಯಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್ ಗಟ್ಟಿ, ನೆಟ್ಟಣಿಗೆಮುಳ್ಳೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಹಿರೇಬಂಡಾಡಿ ಗ್ರಾ.ಪಂ ಅಧ್ಯಕ್ಷೆ ಸದಾನಂದ ಶೆಟ್ಟಿ, ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್, ಅರುಣಾ ರೈ, ಮುಕೇಶ್ ಕೆಮ್ಮಿಂಜೆ, ಸುದೇಶ್ ಶೆಟ್ಟಿ, ಹಿಂದುಳಿದ ಬಿಂದಿಯಾ ನಾಯ್ಕ, ಕಾರ್ಮಿಕ ಇಲಾಖೆ ನಾಝಿಯಾ ಸುಲ್ತಾನ್, ತಹಸೀಲ್ದಾರ್ ಪುರಂದರ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.