Published
3 hours agoon
By
Akkare News2024ರ ಎ.6ರಂದು ಸೋಮೇಶ್ವರ ಪುರಸಭೆಯಲ್ಲಿ ರೆವಿನ್ಯೂ ಆಫೀಸರ್ ಆದ ಪುರುಷೋತ್ತಮರವರ ವಾಟ್ಸಾಪ್ ನಂಬರಿಗೆ ಕಾಲ್ ಮಾಡಿದ ಆರೋಪಿಯು ತಾನು ಲೋಕಾಯುಕ್ತದಿಂದ ಮಾತನಾಡುತ್ತಿರುವುದು ನಿಮ್ಮ ಮೇಲೆ ಅಲಿಗೇಶನ್ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಕಚೇರಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ, ಹಣ ನೀಡುವಂತೆ ತಿಳಿಸಿ, ಇಲ್ಲವಾದರೆ ತೊಂದರೆ ಮಾಡುವುದಾಗಿ ಹೇಳಿದ್ದಾನೆ.
ಬಳಿಕ ಕರೆ ಮಾಡಿದ ಆರೋಪಿಯ ಮೊಬೈಲ್ ನಂಬರನ್ನು ಟೂಕಾಲರ್ ನಲ್ಲಿ ಪರೀಶೀಲಿಸಿದಾಗ ಡಿ. ಪ್ರಭಾಕರ. ಲೋಕಾಯುಕ್ತ. ಪಿ.ಐ ಎಂದು ತೋರಿಸಿತ್ತು. ಈ ಬಗ್ಗೆ ಪುರುಷೋತ್ತಮರವರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಅಧಿಕಾರಿಗಳಲ್ಲಿ ಪೋನ್ ಮೂಲಕ ವಿಷಯ ತಿಳಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿಗಳು ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಪುರುಷೋತ್ತಮ ರವರ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಲ್ಲಿ ನಾಯರ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಕೃಷ್ಣ. ಆರ್. ರವರಿಗೆ ಕೂಡಾ ಇದೇ ರೀತಿ ಕರೆ ಮಾಡಿ ಬೆದರಿಕೆವೊಡ್ಡಿರುತ್ತಾರೆ ಎಂದು ತಿಳಿದು ಬಂದಿದೆ.
ಕರೆ ಮಾಡಿದ ವ್ಯಕ್ತಿಯು ಪುರುಷೋತ್ತಮರವರ ಹಣವನ್ನು ಮೋಸದಿಂದ ಪಡೆದುಕೊಳ್ಳುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಎಂದು ನಟಿಸಿ ನಂಬಿಸಿ ಸುಳ್ಳು ಹೇಳಿರುವುದಲ್ಲದೆ, ಹಣಕ್ಕಾಗಿ ಬೆದರಿಕೆವೊಡ್ಡಿರುವ ಜೊತೆಗೆ ಆ ವ್ಯಕ್ತಿ ಪುರುಷೋತ್ತಮ ಅವರ ಕಚೇರಿ ಸಿಬ್ಬಂದಿ ಅಧಿಕಾರಿಗಳಿಗೆ ಹಣಕ್ಕಾಗಿ ಬೆದರಿಕೆವೊಡ್ಡಿರುತ್ತಾನೆ ಎಂದು ಪುರುಷೋತ್ತಮ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದ ಆರೋಪಿಯ ಪತ್ತೆಯ ಬಗ್ಗೆ ಮಂಗಳೂರು ಪೊಲೀಸರು ಆರೋಪಿಯನ್ನು ತಾಂತ್ರೀಕ ಸಹಾಯದಿಂದ ಪತ್ತೆಮಾಡಿ, ಆರೋಪಿಯನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.