Published
15 hours agoon
By
Akkare Newsಸುಬ್ರಹ್ಮಣ್ಯದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಹರಿಹರ ಪಳ್ಳತ್ತಡ್ಕದಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಹರಿಹರ ಪಳ್ಳತ್ತಡ್ಕದ ಅಯ್ಯಪ್ಪ ಸ್ವಾಮಿ ಆರಾಧನ ಮಂದಿರ ಸಂಗಮ ಕ್ಷೇತ್ರದಲ್ಲಿ ಪೂಜೆಯ ಸಂದರ್ಭದಲ್ಲಿ ಸ್ಥಳೀಯರ ಅಡಿಕೆ ತೋಟದಲ್ಲಿ ವ್ಯಕ್ತಿಯೊಬ್ಬರು ಆಹಾರ ಸೇವಿಸದೆ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಹರಿಹರ ಪಳ್ಳತ್ತಡ್ಕ ಗ್ರಾ.ಪಂ.ಗಮನಕ್ಕೆ ತಂದರು.
ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಸಹಕಾರದೊಂದಿಗೆ ಆ ವ್ಯಕ್ತಿಯನ್ನು ಆಯಂಬುಲೆನ್ಸ್‌ನಲ್ಲಿ ಸುಬ್ರಹ್ಮಣ್ಯ ಠಾಣೆಗೆ ಕರೆದುಕೊಂಡು ಹೋಗಿ, ಮಾಹಿತಿ ನೀಡಿದರು. ಈ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿಯ ಮನೆಯವರು ಠಾಣೆಗೆ ಆಗಮಿಸಿದರು.
ಬಂಟ್ವಾಳದ ಎಡಪದವು ಎಂಬಲ್ಲಿನ ನಿರಂಜನ್ ಕುಟುಂಬ ಸಮೇತರಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ವೇಳೆ ತಂಡದಿಂದ ನಿರಂಜನ್ ನಾಪತ್ತೆಯಾಗಿದ್ದರು. ಪತ್ತೆಯಾದ ನಿರಂಜನ್ ಅವರನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಅವರ ಉಪಸ್ಥಿತಿಯಲ್ಲಿ ಮನೆಯವರು ಗುರುತು ಪತ್ತೆ ಮಾಡಿ ಕರೆದುಕೊಂಡು ಹೋಗಿದ್ದಾರೆ. ಸ್ಥಳೀಯ ಪ್ರಮುಖರು ಸಹಕರಿಸಿದರು.