ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನನ್ನ ಸ್ವಂತ ಜಾಗದಲ್ಲಿ ನನಗೆ ಮನೆ ಕಟ್ಟಲು ಬಿಡುತ್ತಿಲ್ಲ..!! ಶಾಸಕ ಅಶೋಕ್ ರೈಗೆ ದೂರು ನೀಡಿದ ಮಹಿಳೆ

Published

on

ಪುತ್ತೂರು: ನನ್ನ ಹೆಸರಿನಲ್ಲಿ ಸ್ವಂತ ಜಾಗವಿದೆ, ಆದರೂ ನನ್ನ ಜಾಗದಲ್ಲಿ ನ ನಗೆ ಮನೆ ಕಟ್ಟಲು ಬಿಡುತ್ತಿಲ್ಲ ಎಂದು ಪುತ್ತೂರು ನಗರಸಭಾ ವ್ಯಾಪ್ತಿಯ ಮಹಿ ಳೆಯೋರ್ವರು ಪುತ್ತೂರು ಶಾಸಕರಾದ ಅಶೋಕ್ ರೈ ಅವರಲ್ಲಿ ದೂರು ನೀಡಿದ್ದಾರೆ.

ನೆಲ್ಲಿಕಟ್ಟೆ ನಿವಾಸಿ ಸುಶೀಲಾ ಎಂಬವರು ದೂರು ನೀಡಿದ ಮಹಿಳೆ. ನೆಲಿ ಕಟ್ಟೆಯಲ್ಲಿ ೫ ಸೆಂಟ್ಸ್ ಜಾಗ ಬಹಳ ವರ್ಷಗಳ ಹಿಂದೆಯೇ ಮಂಜೂರಾಗಿತ್ತು. ಅ ಜಾಗದಲ್ಲಿ ಮನೆ ಕಟ್ಟಲು ಮುಂದಾದಾಗ ಅದನ್ನು ತಡೆಯಲಾಗಿತ್ತು. ನಮ್ಮ ಹೆಸರಿನಲ್ಲಿ ಜಾಗವಿದ್ದರೂ ನಮಗೆ ಮನೆ ಕಟ್ಟುವಂತಿಲ್ಲ, ನನ್ನ ಪತಿ ಇದೇ ಕಾರಣಕ್ಕೆ ಈ ಹಿಂದೆ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ನನ್ನ ಜಾಗದಲ್ಲಿ ಮನೆ ಕಟ್ಟಲು ಅವಕಾಶ ಮಾಡಿಕೊಡುವಂತೆ ಶಾಸಕರಿಗೆ ಮಹಿಳೆ ಮನವಿ ಸಲ್ಲಿಸಿದ್ದಾರೆ.

 

ಪರಿಶೀಲನೆ ಮಾಡಿ ತಹಶಿಲ್ದಾರ್‌ಗೆ ಸೂಚನೆ

ಮಹಿಳೆಯ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ಅವರು ತಕ್ಷಣವೇ ತಹಶಿಲ್ದಾರ್‌ಗೆ ಕರೆ ಮಾಡಿ ಮಹಿಳೆಯ ದೂರನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಕೂಡಲೇ ಸ್ಥಳದಲ್ಲಿ ಸರ್ವೆ ನಡೆಸಿ ಮಹಿಳೆ ಹೆಸರಿನಲ್ಲಿ ಜಾಗ ಮಂಜೂರಾಗಿದ್ದರೆ ಅದನ್ನು ಕೊಡುಸುವಂತೆ ಸೂಚನೆ ನೀಡಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version