Published
1 day agoon
By
Akkare Newsಮಂಗಳೂರು ಜನವರಿ 07: ಮಂಗಳೂರಿನ ಜೈಲಿಗೆ ಹೊರಗಡೆಯಿಂದ ಮೊಬೈಲ್ ಹಾಗೂ ಸಿಗರೇಟ್ ಎಸೆಯಲು ಯತ್ನಿಸಿದ ಯುವಕನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪಂಜಿಮೊಗರಿನ ಪ್ರಜ್ವಲ್ (21) ಬಂಧಿತ ಆರೋಪಿ. ಈತ ರವಿವಾರ ಅಪರಾಹ್ನ 3ಕ್ಕೆ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ ಪ್ರವೇಶಿಸಿ ಅಲ್ಲಿಂದ ಕಾರಾಗೃಹದ ಒಳಗೆ ಕೆಂಪು ಬಣ್ಣದ ಗಮ್‌ಟೇಪ್‌ನಿಂದ ಸುತ್ತಿದ ಪೊಟ್ಟಣಗಳನ್ನು ಎಸೆಯಲು ಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಗಸ್ತುನಿರತ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಟ್ಟಣದೊಳಗೆ ಎರಡು ಕೀ ಪ್ಯಾಡ್ ಮೊಬೈಲ್ ಮತ್ತು ಎರಡು ಪ್ಯಾಕೆಟ್ ಸಿಗರೇಟ್ ಇತ್ತು ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ