Published
1 day agoon
By
Akkare Newsಮಂಗಳೂರು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮತ್ತು ಹಸುಳೆಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ವಾಸವಾಗಿರುವ ತೆಲಂಗಾಣದ ತೇಜ ಅವರ ಪತ್ನಿ ಬನೋತ್ ದುರ್ಗಾ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುಗಳು ಕ್ರಮವಾಗಿ 1.2 ಕೆ.ಜಿ, 1.1 ಕೆ.ಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿವೆ. 7 ಲಕ್ಷದಲ್ಲಿ ಒಂದು ಇಂತಹ ಪ್ರಕರಣ ಇರುತ್ತದೆ. ನಾಲ್ಕು ಶಿಶುಗಳು ಇದ್ದ ಕಾರಣ ಗರ್ಭಿಣಿಯ ಆರೋಗ್ಯದ ದೃಷ್ಟಿಯಿಂದ 30 ವಾರಗಳು ತುಂಬಿದ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಇದೊಂದು ಸವಾಲಿನ ಕೆಲಸವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಸ್ತ್ರೀರೋಗ ತಜ್ಞೆ ಡಾ.ಜೊಯ್ಲಿನ್ ಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಡಾ. ಮುರಳೀಧರ, ಡಾ. ರಾಮ್ ಬಸ್ತಿ, ಡಾ. ಮಹೇಶ್, ಡಾ. ಸುಜಯ್ ರಾವ, ಡಾ. ವಿಸ್ಮಯಾ, ಡಾ.ಏಕ್ತಾ, ಡಾ. ದಿಯಾ, ಡಾ. ನಯನಾ, ನರ್ಸ್‌ಗಳಾದ ಪ್ರೇಕ್ಷಾ, ರೇಷ್ಮಾ ಸಹಕಾರ ನೀಡಿದರು.