ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬೀಡಿ ಉದ್ಯಮಿಯ ಮನೆಗೆ ನಕಲಿ ಈಡಿ ದಾಳಿ ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ!!?

Published

on

ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್‌ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿನಲ್ಲಿ ಹಣ ಲೂಟಿ ಮಾಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಇಡೀ ಪ್ರಕರಣದ ಪ್ರಮುಖ ಸೂತ್ರಧಾರ ಕಾರಿನ ಚಾಲಕ ಎಂಬುದಾಗಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.


 

ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರು, ಮೊದಲು ಕುಟುಂಬ ಸದಸ್ಯರ 5 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅವರು ವಾಪಾಸ್ ಹೋಗುವಾಗ ಮೊಬೈಲ್‌ಗಳನ್ನು ಅವರ ಜತೆಯಲ್ಲೇ ತೆಗೆದುಕೊಂಡು ಹೋಗಿರಬಹುದು ಎಂದು ಕುಟುಂಬ ಸದಸ್ಯರು ಭಾವಿಸಿದ್ದರು. ಆದರೆ, ಮೊಬೈಲ್‌ಗಳು ಮೂರನೆಯ ಮಹಡಿಯಲ್ಲಿ ಪತ್ತೆಯಾಗಿವೆ. ಅದೇ ಕೋಣೆಯಲ್ಲಿ ಮೊಬೈಲ್‌ನಿಂದ ಸಿಮ್ ತೆಗೆದು ತುಂಡರಿಸಿ ಅಲ್ಲೇ ಎಸೆದಿದ್ದಾರೆ. ಈ ಬೆನ್ನಲ್ಲೇ ಸುಲೈಮಾನ್ ಹಾಜಿ ಅವರು ಜಾಗ ಮಾರಾಟದಿಂದ ಪಡೆದ ಹಣದ ಬಗ್ಗೆ ಯಾರಿಗೆಲ್ಲಾ ತಿಳಿದಿತ್ತು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಜಾಗ ಮಾರಾಟದಿಂದ ಬಂದ ಹಣದ ಬಗ್ಗೆ ನಿಖರ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ತನಿಕೆಯ ಜಾಡು ಹಚ್ಚಿದಾಗ ಸತ್ಯ ಬಯಲಾಗಿದೆ.

 

ತಮಿಳುನಾಡು ನೋಂದಣಿಯ ಕಾರಿನಲ್ಲಿ ಆರು ಮಂದಿ ಆಗಮಿಸಿ ತಾವು ಇ.ಡಿ. ಅಧಿಕಾರಿಗಳೆಂದು ಮನೆಗೆ ಪ್ರವೇಶಿಸಿ ಅಲ್ಲಿಂದ ಹಣ ಲೂಟಿಗೈದು ಪರಾರಿಯಾಗಿದ್ದರು. ವಿಶೇಷ ಎಂದರೆ ಅಲ್ಲಿಗೆ ಆಗಮಿಸಿದ್ದ ಆರು ಮಂದಿಯಲ್ಲಿ ಚಾಲಕನಿಗೆ ಮಾತ್ರ ಕನ್ನಡ ಬರುತ್ತಿತ್ತು. ಉಳಿದವರೆಲ್ಲರೂ ಇಂಗ್ಲಿಷ್‌ ಮತ್ತು ಬೇರೆ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರು ಮಾತು ಅರ್ಥವಾಗುತ್ತಿಲ್ಲ ಎಂದಾಗ ಚಾಲಕನೇ ಸುಲೈಮಾನ್‌ ಅವರಿಗೆ ನಿರ್ದೇಶನ ನೀಡುತ್ತಿದ್ದ.

 

 

 

ಮೊದಲಾಗಿ ಬೀಡಿ ಕಾರ್ಮಿಕರಿಗೆ ನೀಡಲು ಇರಿಸಿದ್ದ ಹಣವನ್ನು ತೋರಿಸಿದ್ದಾಗ ತಂಡದಲ್ಲಿದ್ದವ ಬೇರೆ ಹಣ ಇರುವ ಬಗ್ಗೆ ಕೇಳಿದ್ದ ಆಗ ಚಾಲಕನೇ ತನಗೆ ಬೇಕಾದ ಹಾಗೆ ಪ್ರಶ್ನೆಗಳನ್ನು ಕೇಳಿ ಹಣ ತೋರಿಸಲು ಹೇಳಿದ್ದ. ಮಾತ್ರವಲ್ಲದೆ ಆತನಿಗೆ ಸುಲೈಮಾನ್‌ ಅವರ ಎಲ್ಲ ವ್ಯವಹಾರಗಳ ಕುರಿತು ಸ್ಪಷ್ಟ ಮಾಹಿತಿ ಇರುವಂತೆ ಪ್ರಶ್ನೆಗಳನ್ನು ಕೇಳುತ್ತಿದ್ದ. ಆದುದರಿಂದ ಇಡೀ ದರೋಡೆಯ ಸಂಚನ್ನು ಈತನೇ ಹೆಣೆದಿರಬೇಕು. ಆತನಿಗೆ ಸ್ಥಳೀಯ ಪರಿಸರದ ಪೂರ್ಣ ಮಾಹಿತಿ ಮಾತ್ರವಲ್ಲದೆ ಸುಲೈಮಾನ್‌ ಅವರ ವ್ಯವಹಾರಗಳ ಬಗ್ಗೆಯೂ ಪೂರ್ತಿ ವಿಷಯ ಗೊತ್ತಿರಬೇಕು ಎಂಬ ಸಂಶಯ ಪೊಲೀಸರದ್ದಾಗಿದೆ. ಆದುದರಿಂದ ಈಗ ಮುಖ್ಯವಾಗಿ ಆತನ ಸೆರೆ ಹಿಡಿಯಲು ಶೋಧ ಕಾರ್ಯ ನಡೆಸುತ್ತಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version