ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನೆಹರುನಗರದ ಖ್ಯಾತ ಹೋಟೆಲ್ ಶ್ರೀಕೃಷ್ಣ ಭವನ ಸ್ಥಳಾಂತರ

Published

on

ಪುತ್ತೂರು: ಒಂದೊಮ್ಮೆ ನೆಹರುನಗರದ ಜನರ ಮನಸ್ಸಿನಲ್ಲಿ ಹೆಸರು ಗಿಟ್ಟಿಸಿಕೊಂಡಿತ್ತು ಹೋಟೆಲ್ ಆನಂದ ಭವನ. ಕಾಲಕ್ರಮೇಣ ತೆರೆಮರೆಗೆ ಸರಿಯಿತು. ಬಳಿಕ ಜನರ ಹಸಿವು ನೀಗಿಸುವಲ್ಲಿ ಹೆಸರು ಪಡೆದುಕೊಂಡಿದ್ದೇ ಹೋಟೆಲ್ ಶ್ರೀಕೃಷ್ಣ ಭವನ.


ಆನಂದ ಭವನದ ಬಳಿಕ ನೆಹರುನಗರದಲ್ಲಿ ಒಂದೊಳ್ಳೆ ಹೋಟೆಲ್ ಇಲ್ಲ ಎಂದು ಜನರಾಡಿಕೊಳ್ಳುತ್ತಿದ್ದ ಹೊತ್ತಿನಲ್ಲೇ ಹುಟ್ಟಿ ಬಂದದ್ದು ಶ್ರೀ ಕೃಷ್ಣ ಭವನ. ಅಷ್ಟೇ ವೇಗವಾಗಿ ಜನರ ಮನಸ್ಸಿನಲ್ಲಿ ಭದ್ರವಾದ ಸ್ಥಾನವನ್ನು ಪಡೆಯಿತು. ಇಂದು ನೆಹರುನಗರದಲ್ಲಿ ಹಲವರ ಹಸಿವು ತಣಿಸುವ ಆಹಾರ ಮಳಿಗೆಯಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಕಳೆದ ಹಲವು  ವರ್ಷಗಳಿಂದ ಕಲ್ಲೇಗ ಕಲ್ಕುಡ ದೈವಸ್ಥಾನದ ಪಕ್ಕದಲ್ಲೇ ಇದ್ದ ಅಶ್ವಿನಿ ಕಾಂಪ್ಲೆಕ್ಸ್’ನಲ್ಲಿ ಇದ್ದ ಈ ಹೋಟೆಲ್ ಇದೀಗ ಪಟ್ಲ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಳ್ಳುತ್ತಿದೆ.

 

ಜನವರಿ 24ರಂದು ಲಕ್ಷ್ಮೀ ಪೂಜೆ ನಡೆದು, ಪಟ್ಲ ಕಾಂಪ್ಲೆಕ್ಸ್’ನಲ್ಲಿ ಹೋಟೆಲ್ ಶ್ರೀಕೃಷ್ಣ ಭವನ ಶುಭಾರಂಭಗೊಳ್ಳಲಿದೆ‌. ಮತ್ತೆ ಬಿಸಿ – ಬಿಸಿಯಾಗಿ ಶುಚಿ – ರುಚಿಯಾಗಿ ಆಹಾರ ತಯಾರಿಸಲು ಶ್ರೀಕೃಷ್ಣ ಭವನ ಸಿದ್ಧಗೊಂಡಿದೆ.

ಫುಡ್ ಇಂಡಸ್ಟ್ರಿ ಅಥವಾ ಆಹಾರ ಕ್ಷೇತ್ರ ಎವರ್ ಗ್ರೀನ್ ಎನ್ನುವ ಮಾತು‌ ಪ್ರಚಲಿತದಲ್ಲಿದೆ. ಆದರೆ ಅಷ್ಟೇ ಸವಾಲಿನ ಕ್ಷೇತ್ರವೂ ಹೌದು ಎನ್ನುವುದು ಸತ್ಯ. ಈ ಸವಾಲನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ದಕ್ಕಿಸಿಕೊಂಡಿರುವ ಶ್ರೀ ಕೃಷ್ಣ ಭವನ, ಜನರ ನಿರೀಕ್ಷೆಗೆ ತಕ್ಕಂತೆ  ರೂಪುಗೊಂಡಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version