Published
3 months agoon
By
Akkare Newsಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಅನುದಾನ ಕೋರಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದ್ದು , ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಹೆಚ್ಚುವರಿಯಾಗಿ ಎರಡು ಕೋಟಿ ರೂ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೀರಾ ಗ್ರಾಮೀಣ ರಸ್ತೆಗಳು ಅಭಿವೃದ್ದಿ ಕಾಣದೇ ಅನೇಕ ವರ್ಷಗಳೇ ಕಳೆದಿದೆ. ರಸ್ತೆಗೆ ಕಾಂಕ್ರೀಟ್ ಮಾಡಿ ಎಂದು ಗ್ರಾಮಸ್ಥರಿಂದ ಹಲವಾರು ಅರ್ಜಿಗಳು ಬಂದಿದ್ದು , ಈಗಾಗಲೇ ಬಂದಿರುವ ಅನುದಾನವನ್ನು ಎಲ್ಲಾ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಹಂಚಲಾಗಿದೆ. ಆದರೆ ಇನ್ನೂ ಕೆಲವು ರಸ್ತೆಗಳು ಬಾಕಿ ಇದ್ದು ಅವುಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅಗತ್ಯತೆ ಇದೆ. ಗ್ರಾಮೀಣ ಭಾಗದ ರಸ್ತೆಗಳ ಕಾಂಕ್ರಿಟೀಕರಣದೆ ಬೇಡಿಕೆ ತುಂಬಾ ವರ್ಷದಿಂದ ಹಾಗೆಯೇ ಉಳಿದಿದೆ. ಗ್ರಾಮಗಳ ಅಭಿವೃದ್ದಿ ಮತ್ತು ಗ್ರಾಮೀಣ ಜನತೆಯ ಕೆಲವೊಂದು ಕನಿಷ್ಟ ಬೇಡಿಕೆಗಳನ್ನು ಈಡೇರಿಸಬೇಕಾಗಿದ್ದು ತನ್ನ ಕರ್ತವ್ಯವಾಗಿದ್ದು ಇದಕ್ಕಾಗಿ ಅನುದಾನವನ್ನು ಒದಗಿಸುವಂತೆ ಶಾಸಕರು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಬೇಡಿಕೆ ಈಡೇರಿಸಿದ ಸಚಿವ ಖರ್ಗೆ
ಶಾಸಕರಾದ ಅಶೋಕ್ ರೈ ಅವರ ಮನವಿಗೆ ಸ್ಪಂದಿಸಿದ ಸಚಿವ ಪ್ರಿಯಾಂಕ ಖರ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಗಿ ಎರಡು ಕೋಟಿ ಅನುದಾನವನ್ನು ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ನೀಡಲಾಗುವುದು. ಗ್ರಾಮೀಣ ರಸ್ತೆಗಳು ಅಭಿವೃದ್ದಿಯ ಬಗ್ಗೆ ಶಾಕರ ಕಾಳಜಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶೀಘ್ರವೇ ಗ್ರಾಮೀಣ ರಸ್ತೆಗಳಿಗೆ ಕಾಂಕ್ರೀಟ್ ಭಾಗ್ಯ: ಅಶೋಕ್ ರೈ
ಗ್ರಾಪಂ ವ್ಯಾಪ್ತಿಯಲ್ಲಿರುವ ಗ್ರಾಮೀಣ ರಸ್ತೆಗಳು ಇನ್ನೂ ಅಭಿವೃದ್ದಿಯಾಗಿಲ್ಲ ಅದನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಅನುದಾನಕ್ಕಾಗಿ ಸಚಿವರಿಗೆ ಮನವಿ ಮಾಡಿದ್ದೇನೆ. ಮನವಿಗೆ ಸ್ಪಂದಿಸಿದ ೨ ಕೋಟಿ ಹೆಚ್ಚುವರಿ ಅನುದಾನ ಒದಗಿಸಿದ್ದಾರೆ. ಇದಕ್ಕಾಗಿ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನ್ನ ಶಾಸಕತ್ವದ ಅವಧಿಯಲ್ಲಿ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳನ್ನೂ ಅಭಿವೃದ್ದಿ ಮಾಡಬೇಕೆಂಬ ಇಚ್ಚೆಯನ್ನು ಹೊಂದಿದ್ದೇನೆ, ಇದಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಪಡೆಯಬೇಕಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.