Published
2 months agoon
By
Akkare Newsಪುತ್ತೂರು: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪುತ್ತೂರು ಸಾಂತ್ವನ ಕೇಂದ್ರ ಕಟ್ಟಡದ ದುರಸ್ತಿ ಕಾಮಗಾರಿಗೆ ಸೋಮವಾರ ಚಾಲನೆ ದೊರಕಿದೆ.
ಸೂಕ್ತ ಕೊಠಡಿಯ ಅವಶ್ಯಕತೆ
ಸಾಂತ್ವನ ಕೇಂದ್ರಕ್ಕೆ ಸೂಕ್ತ ಕೊಠಡಿಯ ಅವಶ್ಯಕತೆ ಬೇಕಾಗುತ್ತದೆ. ನೊಂದವರಿಗೆ ಸಾಂತ್ವನದ ಜೊತೆಗೆ ಸಾಮಾಜಿಕ ನ್ಯಾಯವನ್ನು ಕೊಡುವಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಗುಪ್ತವಾಗಿ ಮಾತುಕತೆ ನಡೆಸಬೇಕಾಗುತ್ತದೆ. ಈ ಮಾತುಕತೆಗೆ ಸೂಕ್ತವಾದ ಕೊಠಡಿಯ ಅವಶ್ಯಕತೆಯೂ ಬೇಕಾಗುತ್ತದೆ., ಸಾರ್ವಜನಿಕವಾಗಿ ಹೇಳಲಾಗದ ಕೆಲವೊಂದು ವಿಚಾರಗಳನ್ನು ಸಾಂತ್ವನ ಕೇಂದ್ರದಲ್ಲಿರುವವರ ಜೊತೆ ಗೌಪ್ಯವಾಗಿ ಮಾತನಾಡಬೇಕಾಗುತ್ತದೆ. ಈ ಹಿಂದೆ ಕಟ್ಟಡದಲ್ಲಿ ಈ ವ್ಯವಸ್ಥೆ ಇತ್ತು. ಆದರೆ ಕಾಲಕ್ರಮೇಣ ಕಟ್ಟಡ ಶಿಥಿಲಗೊಂಡ ಕಾರಣ ಅಲ್ಲಿಂದ ತಾಲೂಕು ಪಂಚಾಯತ್ ಕಟ್ಟಡದ ಹಾಲ್‌ಗೆ ಸ್ಥಳಾಂತರ ಮಾಡಲಾಗಿತ್ತು.
ನಗರಸಭೆಗೆ ಶಾಸಕರ ಖಡಕ್ ಸೂಚನೆ
ಸಾಂತ್ವನ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಮತ್ತು ಈಗ ಇರುವ ಕಟ್ಟಡದಲ್ಲಿ ಸಔಲಭ್ಯದ ಕೊರತೆ ಇರುವ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ನಗರಸಭಾ ಅನುದಾನದಲ್ಲಿ ಕಟ್ಟಡವನ್ನು ದುರಸ್ಥಿ ಮಾಡಿ ಬಳಕೆಗೆ ಯೋಗ್ಯ ರೀತಿಯಲ್ಲಿ ಕಟ್ಟಡದ ನವೀಕರಣ ಮಾಡಬೇಕೆಂದು ಶಾಸಕ ಅಶೋಕ್ ರೈ ಸೂಚನೆ ನೀಡಿದ್ದರು.
ಸಾಂತ್ವನ ಮತ್ತು ಸಾಮಾಜಿಕ ನ್ಯಾಯದ ಕೇಂದ್ರ
ಪುತ್ತೂರಿನ ಸಾಂತ್ವನ ಕೇಂದ್ರದ ದುರಸ್ಥಿಗೆ ಕೆಲವು ಪ್ರಮುಖರಿಂದ ಬೇಡಿಕೆ ಬಂದಿತ್ತು. ದುರಸ್ಥಿ ಮಾಡುವಂತೆ ಸೂಚನೆ ನೀಡಿದ್ದೇನೆ ಕೆಲಸ ಆರಂಭವಾಗಿದೆ, ಕೆಲವೇ ದಿನದಲ್ಲಿ ಇದರ ಕಾಮಗಾರಿ ಪೂರ್ಣವಾಗಲಿದೆ. ಪುತ್ತೂರಿನಲ್ಲಿರುವ ಸಾಂತ್ವನ ಕೇಂದ್ರ ನೊಂದವರಿಗೆ ಸಾಂತ್ವನ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ನೀಡುವ ಏಕೈಕ ಕೇಂದ್ರವಾಗಿದೆ. ಎಲ್ಲೂ ಹೇಳಲಾಗದ್ದನ್ನು ಇಲ್ಲಿ ಬಂದು ಇಲ್ಲಿನ ಅಪ್ತ ಸಮಾಲೋಚಕಿಯರ ಜೊತೆ ಸಮಸ್ಯೆ ವಿನಿಮಯ ಮಾಡಿಕೊಂಡು ಅದರ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಾಂತ್ವನ ಕೇಂದ್ರ ಕುಟುಂಬ ಮತ್ತು ವ್ಯಕ್ತಿಗಳನ್ನು ಒಗ್ಗೂಡಿಸುವ ಕೇಂದ್ರವಾಗಿ ಕೆಲಸ ಮಾಡುತ್ತದೆ , ಇಲ್ಲಿಗೆ ಬಂದ ಅದೆಷ್ಟೋ ಕುಟುಂಬಗಳು ಮತ್ತೆ ಒಂದಾಗಿ ಸಂಥೋಷದ ಜೀವನ ನಡೆಸುವಂತಾಗಿದೆ, ಇಂಥಹದೊಂದು ಕೇಂದ್ರಕ್ಕೆ ಸೌಲಭ್ಯಗಳನ್ನೊಳಗೊಂಡ ಕಟ್ಟಡದ ಅಗತ್ಯತೆಯನ್ನು ಕಂಡು ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ
ಅಶೋಕ್ ರೈ, ಶಾಸಕರು, ಪುತ್ತೂರು