Published
2 months agoon
By
Akkare Newsಬೆಟ್ಟಪಾಡಿ:ಪುತ್ತೂರಿನಿಂದ ಪರ್ಲಡ್ಕ ದೇವಸ್ಯ ಮಾರ್ಗವಾಗಿ ಗುಮ್ಮಟೆಗದ್ದೆವರೆಗೆ ಬಂದು ಹಿಂತಿರುಗಿ ಹೋಗುತ್ತಿದ್ದ ಸರಕಾರಿ ಬಸ್ ಕಳೆದ ಕೆಲವು ಸಮಯದಿಂದ ಬಾರದೆ ಈ ಭಾಗದ ಜನರು ತೊಂದರೆಗೆ ಸಿಲುಕಿದ್ದು ಮತ್ತೆ ಬಸ್ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ಗುಮ್ಮಟೆಗದ್ದೆ ಅಜ್ಜಿಕಲ್ಲು ಭಾಗದ ಜನರ ಅನುಕೂಲತೆಗಾಗಿ ಶಾಸಕರ ಮುಜುವರ್ಜಿಯಲ್ಲಿ ಕಳೆದ ಜುಲೈ ತಿಂಗಳಲ್ಲಿ ಸರಕಾರಿ ಬಸ್ಸು ಒದಗಿಸಿದ್ದರೂ ಈಗ ಸಂಚಾರ ನಿಲ್ಲಿಸಿದೆ.
ಬಸ್ ಬಾರದ ಕಾರಣ ಬೆಳಗ್ಗೆ, ಸಂಜೆ ಯಾವುದಾದರೂ ಇತರ ವಾಹನಗಳನ್ನು ಇಲ್ಲಿನವರು ಅವಲಂಬಿಸಬೇಕಾಗಿದೆ. ಇದಕ್ಕಾಗಿ ದುಪ್ಪಟ್ಟು ಹಣ ವ್ಯಯ ಮಾಡಬೇಕಾಗಿದೆ.
ಚಾಲಕರ ಕೊರತೆಯಿಂದ ಸಮಸ್ಯೆ
ಇಲಾಖೆಯಲ್ಲಿ ಬಸ್ಸು ಕೊರತೆ ಇಲ್ಲ. ಚಾಲಕರ ಕೊರತೆಯಿಂದ ಇಲ್ಲಿ ಬಸ್ ಬರುತ್ತಿಲ್ಲ. ಬಸ್ ಸಂಚಾರ ಮುಂದುವರಿಸಲು ಕೆ.ಎಸ್.ಅರ್.ಟಿ.ಸಿ ಡಿಪೊ ಮ್ಯಾನೇಜರ್‌ಬಳಿ ಮಾತನಾಡುತ್ತಾ ಇದ್ದೇವೆ. ಶಾಸಕರು ಕೂಡ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶೀಘ್ರ ವ್ಯವಸ್ಥೆ ಸರಿಯಾಗುತ್ತದೆ ಎಂಬ ಭರವಸೆ ಇದೆ. ಚೆಲ್ಯಡ್ಕ ಸೇತುವೆ ನಿರ್ಮಾಣ ಆದ ಮೇಲಂತೂ ಈ ರಸ್ತೆಯಲ್ಲಿ ಖಾಯಂ ನೆಲೆಯಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ.
–ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸರಕಾರದ ಗ್ಯಾರಂಟಿ ಸಮಿತಿ ಸದಸ್ಯರು
ಪರಿಶೀಲಿಸಿ ಕ್ರಮ
ಪುತ್ತೂರಿನಿಂದ ದೇವಸ್ಯ ಚಿಲ್ಮೆತ್ತಾರು ಮಾರ್ಗವಾಗಿ ಗುಮ್ಮಟಗದ್ದೆ ರಸ್ತೆಯಲ್ಲಿ ಯಾವುದೇ ಬಸ್ ಸಂಚಾರ ಇಲ್ಲದೆ ಇರುವುದರಿಂದ ಸರಕಾರಿ ಬಸ್ ತಾತ್ಕಾಲಿಕವಾಗಿ ಸಂಚರಿಸುತ್ತಿತ್ತು. ಇದೀಗ ಸಂಚಾರ ಸ್ಥಗಿತಗೊಳ್ಳಲು ಇರುವ ಕಾರಣದ ಬಗ್ಗೆ ಪರಿಶೀಲನೆ ನಡೆಸಲಾಗುವುದು.
–ವಾಸು ಪೂಜಾರಿ, ಕೆಎಸ್‌ಆರ್‌ಟಿಸಿ ಡಿಸಿ, ಮಂಗಳೂರು