Published
1 month agoon
By
Akkare News
ಕೆಲವು ದಿನಗಳಿಂದ ಅವರು ಅಸೌಖ್ಯದಿಂದ ಇದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಸಂಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕುಂಬ್ರ ಮೂರ್ತೇದಾರರ ಸೊಸೈಟಿಯಲ್ಲಿ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಅವರು ಕುಂಬ್ರ ವಿಶ್ವ ಯುವಕ ಮಂಡಲದ ಅಧ್ಯಕ್ಷರಾಗಿ, ಅರಿಯಡ್ಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾಗಿ ಹೀಗೆ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಿಸಿಕೊಂಡು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು.
ಚಂದ್ರಕಾಂತ ರವರ ಅನಾರೋಗ್ಯದ ವಿಷಯ ತಿಳಿದ ಎಲ್ಲರೂ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದರು. ಅಲ್ಲದೆ ಅವರಿಗಾಗಿ ಕೈಯ್ಯಲಾದ ಸಹಾಯ ಹಸ್ತ ನೀಡಿದ್ದರು. ಕುಟುಂಬಸ್ಥರ, ಬಂದು ಬಳಗದವರ ಪ್ರಾರ್ಥನೆ ಫಲಿಸಲೆ ಇಲ್ಲ. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.