Published
1 month agoon
By
Akkare News
ಈ ಸಾರ್ವಜನಿಕ ರಜೆಯು ಶಾಲೆಗಳು ಮಾತ್ರವಲ್ಲದೇ, ಸರ್ಕಾರಿ ಕಚೇರಿ, ಇತರ ಸಂಸ್ಥೆಗಳಿಗೆ ಅನ್ವಯಿಸಲಿದೆ. ಯಾವೆಲ್ಲ ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ.
ಶಿವರಾತ್ರಿಯಂದು ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಹವನಗಳು ನಡೆಯುತ್ತವೆ. ಶಿವನ ಭಕ್ತರು ಉಪವಾಸ, ವ್ರತ ಆಚರಿಸಲಿದ್ದಾರೆ. ರಾತ್ರಿಯಿಡೀ ಜಾಗರಣೆ ಮಾಡಲಿದ್ದಾರೆ. ಈ ಸಂಬಂಧ ಸರ್ಕಾರಿ ಅಧಿಕಾರಿಗಳು, ಶಾಲಾ-ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಆಚರಣೆಯಲ್ಲಿ ಪಾಲ್ಗೊಳ್ಳಲು ಈ ಸಾರ್ವತ್ರಿಕ ರಜೆ ಅನುಕೂಲವಾಗಲಿದೆ.
ದೇಶದ ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್, ಬಿಹಾರ್, ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಹರಿಯಾಣ, ಉತ್ತರಾಖಂಡ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಶಾಲೆಗಳಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಉತ್ತರ ಪ್ರದೇಶ: ಸಾರ್ವಜನಿಕ ರಜೆ
ಈ ರಾಜ್ಯದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯಲಿದೆ. ಇಲ್ಲಿನ ಶಾಲೆಗಳಿಗೆ ಕುಂಭಮೇಳ ಪ್ರಯುಕ್ತ ಆಗಾಗ ರಜೆ ಘೋಷಿಸಲಾಗಿತ್ತು. ಇದೀಗ ಮಹಾಶಿವರಾತ್ರಿಯ ದಿನದಂದು ಸಹ ಇಲ್ಲಿನ ಶಾಲೆಗಳಿಗೆ ಸಾರ್ವಜನಿಕ ರಜೆ ನೀಡಲಾಗಿದೆ. ರಾಜ್ಯದ ವಾರ್ಷಿಕ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿ 26 ರಂದು ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ಇದೆ. ಸಾರ್ವಜನಿಕ ರಜೆ ಇರುವ ಕಾರಣ ಸರ್ಕಾರಿ ಸಂಸ್ಥೆಗಳು ಸ್ಥಗಿತಗೊಳ್ಳಲಿವೆ. ಇಲ್ಲಿನ ಶಿವ ದೇವಾಲಯಗಳು ಭಕ್ತರಿಂದ ತುಂಬಿರಲಿವೆ. ಸಾಂಪ್ರದಾಯಿಕವಾಗಿ ಶಿವರಾತ್ರಿ ಆಚರಿಸಲಾಗುತ್ತದೆ.
ಮಧ್ಯಪ್ರದೇಶ: ಸಾರ್ವತ್ರಿಕ ರಜೆ ಘೋಷಣೆ
ಮಧ್ಯಪ್ರದೇಶ ರಾಜ್ಯದ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ರಾಜ್ಯದ ಸರ್ಕಾರಿ ಶಾಲೆ, ಕಚೇರಿಗಳಲ್ಲಿ ಎಂದಿನಂತೆ ಕಾರ್ಯಚಟುವಟಿಕೆ ಇರುವುದಿಲ್ಲ. ಈ ಸುದ್ದಿ ತಿಳಿದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ಮಕ್ಕಳು ಪೋಷಕರೊಂದಿಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಜ್ಯಾದ್ಯಂತ ಅದ್ಧೂರಿ ಶಿವರಾತ್ರಿ ಆಚರಣೆ ನಡೆಸಲಾಗುತ್ತದೆ.
ರಾಜಸ್ಥಾನದಲ್ಲಿ ಎಲ್ಲ ಕಚೇರಿ, ಶಾಲೆಗಳಿಗೆ ರಜೆ
ರಾಜ್ಯದ ಎಲ್ಲ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ರಜೆ ನೀಡಲಾಗಿದೆ. ಮಹಾಶಿವರಾತ್ರಿ ಪ್ರಯುಕ್ತ ಈ ರಾಜ್ಯದಲ್ಲೂ ಬುಧವಾರ ಸಾರ್ವತ್ರಿಕ ರಜೆ ನೀಡಲಾಗಿದೆ. ಸರ್ಕಾರಿ ಕ್ಯಾಲೆಂಡರ್ ನಲ್ಲೂ ಸಹ ಫೆಬ್ರವರಿ 26ರಂದು ಸರ್ಕಾರಿ ರಜೆ ಪ್ರಕಟಿಸಲಾಗಿದೆ. ರಾಜಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಯನ್ನು ವೈಭವದಿಂದ ಆಚರಿಸಲಾಗುತ್ತದೆ. ಶಿವ ಸೇರಿದಂತೆ ಇತರ ಎಲ್ಲ ದೇವಾಲಯಗಳಲ್ಲಿ ಈ ದಿನ ವಿಶೇಷ ಪೂಜೆ ಮಾಡಲಾಗುತ್ತದೆ.
ರಾಜಸ್ಥಾನ ರಾಜ್ಯ ಸರ್ಕಾರದ ಈ ಸಾರ್ವತ್ರಿಕ ರಜೆಯಿಂದಾಗಿ ಸರ್ಕಾರಿ ನೌಕರರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇವರೆಲ್ಲರೂ ಸರ್ಕಾರಿ ರಜೆಯ ಪ್ರಯೋಜನ ಪಡೆಯಲಿದ್ದಾರೆ.
ಬಿಹಾರ್ ರಾಜ್ಯದಲ್ಲೂ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ :ಬಿಹಾರ್ ರಾಜ್ಯದಲ್ಲಿ ಸರ್ಕಾರಿ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿ 26ರಂದು ಬುಧವಾರ ರಜೆ ನೀಡಿದೆ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿರುವ ಸರ್ಕಾರ ಶಾಲೆಗಳಿಗೆ ಮಾತ್ರವಲ್ಲದೇ, ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಿದೆ. ಕೊನೆಯ ಕ್ಷಣದಲ್ಲಿ ಒಂದಷ್ಟು ಬದಲಾವಣೆ ಮಾಡಿ ನಿರ್ಧಾರ ಬದಲಿಸಿ ರಜೆ ಘೋಷಣೆ ಮಾಡಲಾಯಿತು.