Published
1 month agoon
By
Akkare Newsಪುತ್ತೂರು : ಪರಿಯತ್ತೋಡಿ ನಿವಾಸಿಯಾದ ಆಟೋ ಚಾಲಕನೋರ್ವ ಮನೆಯ ಬಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ.
ಪೆರಿಯತ್ತೋಡಿ ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ(40)ರವರು ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ.
ಬೆಳಿಗ್ಗೆ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದಿದ್ದರು. ಮಧ್ಯಾಹ್ನದ ವೇಳೆ ಸಾಲ ವಸೂಲಿಗಾರರ ಕರೆ ಬಂದಿತ್ತು. ಅದಾದ ಬಳಿಕ ಮೃತ ಕೃಷ್ಣ ಅವರು ಮನೆಯ ಬಳಿಯ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಹೋದರರಾದ ಕುಶಾಲಪ್ಪ, ರಿಕ್ಷಾ ಚಾಲಕ ಶಿವರಾಮ, ಹರೀಶ್ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಒಂದೇ ಜಾಗದಲ್ಲಿ ನಿಲ್ಲದೆ ಸಾಗುತ್ತಿರುವುದರಿಂದ ಆತನ ಜತೆಗೆ ಯಾರಾದರೂ ಇರುವುದು ಖಚಿತ ಎನ್ನಲಾಗುತ್ತಿದೆ. ಬಂಟ್ವಾಳದ ಒಂದು ಪ್ರದೇಶದ ವ್ಯಕ್ತಿ ಆತನನ್ನು ಸಂಪರ್ಕಿಸಿರುವ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಇದ್ದು, ಪೊಲೀಸರು ಆ ಮಾಹಿತಿ ಆಧಾರದಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರ ಪತ್ತೆ ?
ಶೀಘ್ರದಲ್ಲೇ ಈ ಪ್ರಕರಣವನ್ನು ಭೇದಿಸುವ ವಿಶ್ವಾಸ ಪೊಲೀಸ್ ಇಲಾಖೆಯಲ್ಲಿದೆ ಎಂದು ತಿಳಿದುಬಂದಿದೆ.