Published
3 hours agoon
By
Akkare Newsತಾಲ್ಲೂಕಿನ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್‌ಲ್ಲಿ ಮಖಾಂ ಉರುಸ್ ಮುಬಾರಕ್ ಏ.20ರಿಂದ 26ರವರೆಗೆ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕೊರಿಂಗಿಲ ಜುಮಾ ಮಸೀದಿ ಉಪಾಧ್ಯಕ್ಷ ಆಲಿಕುಂಞಿ ಕೊರಿಂಗಿಲ ತಿಳಿಸಿದರು.
ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 20ರಂದು ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಅವರು ದುಃವಾ ನೆರವೇರಿಸುವರು. ಕೊರಿಂಗಿಲ ಮಸೀದಿ ಖತೀಬ್ ಜಿ.ಎಚ್.ಅಯ್ಯೂಬ್ ವಹಬಿ ಗಡಿಯಾರ ಉದ್ಘಾಟಿಸುವರು. ಫಾರೂಕ್ ನಯೀಮಿ ಕೊಲ್ಲಂ ಅವರು ಮುಖ್ಯ ಭಾಷಣ ಮಾಡುವರು. 21ರಂದು ಅಬೂರಬೀಹ್ ಸ್ವದಕತ್‌ಉಲ್ಲ ಬಾಖವಿ ಕೊಲ್ಲಂ, 22ರಂದು ಸಿ.ಕೆ.ರಾಶಿದ್ ಬುಖಾರಿ ಕುಟ್ಯಾಡಿ, 23ರಂದು ಅಲ್ ಹಾಫಿಲ್ ಮಾಹಿನ್ ಮನ್ನಾನಿ, 24ರಂದು ಜಬ್ಬಾರ್ ಸಖಾಫಿ ಪಾತೂರ್, 25ರಂದು ಶುಹೈಬುಲ್ ಹೈತಮಿ ವಯನಾಡ್ ಮುಖ್ಯ ಭಾಷಣ ಮಾಡುವರು ಎಂದರು.
26ರಂದು ಸಮಾರೋಪ ನಡೆಯಲಿದ್ದು, ಅಂದು ಸಂಜೆ ಜಿ.ಎಚ್.ಅಯ್ಯೂಬ್ ವಹಬಿ ನೇತೃತ್ವದಲ್ಲಿ ಮೌಲೂದು ಪಾರಾಯಣ, ರಾತ್ರಿ ಸೌಹಾರ್ದ ಸಂಗಮ ನಡೆಯಲಿದೆ. ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಉದ್ಘಾಟಿಸುವರು. ಕುಂಬ್ರ ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ ದಿಕ್ಸೂಚಿ ಭಾಷಣ ಮಾಡುವರು. ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಮಹಮ್ಮದ್ ಕುಂಞಿ, ಉರುಸ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಟಿ.ಎಂ., ಕೊರಿಂಗಿಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.