Published
4 hours agoon
By
Akkare Newsಉಪ್ಪಿನಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಿಂದೂ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ಎ.25ರಂದು ಸಂಜೆ ಪ್ರತಿಭಟನೆ ಹಾಗೂ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಕ ಸಭೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಮೊದಲಿಗೆ ಹಣತೆ ಬೆಳಗಿ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಮತಾಂಧ ಶಕ್ತಿಗಳು ಈ ದೇಶದ ಏಕತೆ ಮತ್ತು ಅಖಂಡತೆಗೆ ಸವಾಲು ಹಾಕುವ ಕೆಲಸ ಮಾಡುತ್ತಿದ್ದು, ಹಿಂದೂ ಧರ್ಮವನ್ನೇ ಟಾರ್ಗೆಟ್ ಮಾಡಿ ಕಾಶ್ಮೀರದ ಪಹಲ್ಗಾಮ್‍ನಲ್ಲಿ 27 ಜನರನ್ನು ಅಮಾನುಷವಾಗಿ ಕೊಲ್ಲುವ ಕೆಲಸ ಮಾಡಿದ್ದಾರೆ. ಇಂಥ ಉಗ್ರವಾದಿಗಳಿಗೆ ಹಾಗೂ ಅವರಿಗೆ ಬೆಂಬಲ ನೀಡುವ ಶಕ್ತಿಗಳಿಗೆ ಹಿಂದೂ ಸಮಾಜದ ಯುವಕರು ಜಾತಿ, ಮತ ಬದಿಗಿಟ್ಟು ರಾಷ್ಟಕ್ಕಾಗಿ ಸಮರ್ಪಣೆಗೆ ಮುಂದಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು- ಕಾಶ್ಮೀರದಲ್ಲಿದ್ದ 370 ವಿಧಿಯನ್ನು ತೆಗೆಯುವ ಮೂಲಕ ಭಯೋತ್ಪಾದಕರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ಭಯೋತ್ಪಾದಕ ಶಕ್ತಿಗಳು ಹಿಂದೂ ಧರ್ಮದವರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇಂಥ ವಿಚಿಧ್ರಕಾರಿ ಶಕ್ತಿಗಳನ್ನು ಹೊಸಕಿ ಹಾಕುವ ಕೆಲಸ ಪ್ರಧಾನಿ ನರೇಂದ್ರ ಮೋದಿಯವರಿಂದ ನಡೆಯಲಿದೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಕೆಲಸವೂ ನಡೆಯಲಿದೆ. ಆದ್ದರಿಂದ ಪ್ರಧಾನಿಯವರಿಗೆ ನಾವೆಲ್ಲಾ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.