Published
10 hours agoon
By
Akkare Newsಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ.3ರಂದು ತಿಂಗಳ ಷಷ್ಠಿ ಧಾರ್ಮಿಕ ಕಾರ್ಯಕ್ರಮ ದೇವಸ್ಥಾನದ ಅರ್ಚಕ ಯೋಗೀಶ್ ಕುಂಜತ್ತಾಯ ಹಾಗೂ ರಮೇಶ್ ಭಟ್ ರವರ ನೇತೃತ್ವದಲ್ಲಿ ನೆರವೇರಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚಾರ್ವಾಕ ಸಾಕ್ಷಾತ್ ಶಿವ ಭಜನಾ ಮಂಡಳಿ, ಬೆಳ್ಳೂರು ಕಾಸರಗೋಡು ಲಕ್ಷ್ಮೀ ಪಾರ್ವತಿ ಮಹಿಳಾ ಭಜನಾ ಸಂಘ, ರಮ್ಯಾ ಮತ್ತು ಬಳಗ ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ, ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ಲಲಿತಾ ಕೆ, ರೇಖಾ ಬಿ.ಎಸ್, ಸೂರಪ್ಪ ಗೌಡ, ಚಂದ್ರಶೇಖರ್ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್ ಹಾಗೂ ಸಿಬ್ಬಂದಿ ಭರತ್, ರಘುನಾಥ್ ಪೂಜಾರಿ ಸಹಿತ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು