Published
18 hours agoon
By
Akkare Newsಪುತ್ತೂರು : ರಾಜ್ಯ ಸರಕಾರದ ಆದೇಶದ ಮೇರೆಗೆ ಪೊಡಿ ಮುಕ್ತ ಪುತ್ತೂರು ತಾಲೂಕು ಮಾಡಲು ವಿವಿಧ ಜಿಲ್ಲೆಯ 30ಕ್ಕೂ ಹೆಚ್ಚು ಸರ್ವೆಯರಗಳು ಪುತ್ತೂರು ತಾಲ್ಲೂಕು ಕಚೇರಿ ಗೆ ಆಗಮಿಸಿದ್ದಾರೆ. ಶಾಸಕರ ವಿಶೇಷ ಮುತುವರ್ಜಿಯಿಂದ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿ ತಾಲೂಕಿನಾದ್ಯಂತ ಉಚಿತ ಪ್ಲಾಟಿಂಗ್/ಆರ್ ಟಿ ಸಿ ಮಾಡುವ ಕೆಲಸವು ಪ್ರಾರಂಭ ವಾಗಿದೆ, ಹಲವು ವರ್ಷಗಳಿಂದ ಆಗದ ಕಡತಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಜನರ ಕೈ ಸೇರಲಿದೆ. ಶಾಸಕರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಸಂಸೆ ವ್ಯಕ್ತವಾಗಲಿದೆ, ಹೊರ ಜಿಲ್ಲೆಗಳಿಂದ ಬಂದ ಸರ್ವೆಗಳಿಗೆ ಉಳಿದುಕೊಳ್ಳಲು ಶಾಸಕರು ಸರ್ವ ವ್ಯವಸ್ಥೆಗಳನ್ನು ಕೂಡ ಮಾಡಿದ್ದಾರೆ.
ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ, ಸರ್ವೆಯರ್ ಗ್ರಾಮಕ್ಕೆ ಬರುವ ಅವರಿಗೆ ಸಹಕಾರ ನೀಡುವಂತೆ, ಜಾಗಕ್ಕೆ ಸಂಬಂಧಪಟ್ಟವರು ಅಳತೆಗೆ ಸುಲಭವಾಗುವಂತಹ ಪೊದೆ ಗಳನ್ನು ತೆಗೆಯುವಂತಹ ಮತ್ತು ಸರ್ವೆ ಮಾಡುವ ಜಾಗದಲ್ಲಿ ದಾರಿಯನ್ನು ಸರಿ ಮಾಡುವಂತಹ ಕೆಲಸದಲ್ಲಿ ತೊಡಗಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡುವಂತೆ ಮತ್ತು ಇದರ ಸದುಪಯೋಗವನ್ನು ಪಡೆಯುವಂತೆ ಶಾಸಕರು ವಿನಂತಿಸಿದ್ದಾರೆ.