Published
3 days agoon
By
Akkare Newsಪುತ್ತೂರು: ಅಶೋಕ್ ಕುಮಾರ್ ಸೊರಕೆ(73ವ) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದಿ. ಸೊರಕೆ ಅಚ್ಚುತ ಪೂಜಾರಿ ಮತ್ತು ದಿ.ಸುನೀತಿ ದಂಪತಿಗಳ ಹಿರಿಯ ಪುತ್ರನಾಗಿರುವ ಅಶೋಕ್ ಕುಮಾರ್ ಸೊರಕೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ಮುಂಡೂರು ಸಿ ಎ ಬ್ಯಾಂಕ್ ಅಧ್ಯಕ್ಷರಾಗಿರುವ ಸುರೇಶ್ ಕುಮಾರ್ ಸೊರಕೆ, ಶ್ರೀಮತಿ ಶರತ್ ಮತ್ತು ಶಶಿಕಲಾ ಅವರ ಸಹೋದರರಾಗಿದ್ದಾರೆ.
ಹಲವು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಅಶೋಕ್ ಕುಮಾರ್ ಸೊರಕೆ ನಿವೃತ್ತಿ ಬಳಿಕ ಸೊರಕೆಯಲ್ಲಿ ನೆಲೆಸಿದ್ದರು. ಮೃತರು ಪತ್ನಿ ರೋಹಿಣಿ, ಪುತ್ರ ಆಶಿಕ್, ಪುತ್ರಿ ಅಶ್ನಿ ಸೇರಿದಂತೆ ಅಪಾರ ಬಂದು ಬಳಗ ಸ್ನೇಹಿತರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.