Published
6 hours agoon
By
Akkare Newsದ್ವಿಚಕ್ರ ವಾಹನ ಸವಾರಿಯ ವೇಳೆ ರಸ್ತೆ ಅಪಘಾತ ಸಂಭವಿಸಿದರೆ ವಾಹನದ ಮೇಲೆ ಕುಳಿತ ಮೂರನೇ ವ್ಯಕ್ತಿಗೂ ವಿಮೆ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
“ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ವರ್ಸಸ್ ಮೊಹಮ್ಮದ್ ಫಯಾಜುದ್ದೀನ್ ಮತ್ತಿತರರು” ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠದ ನ್ಯಾಯಮೂರ್ತಿ ನಟರಾಜ ರಂಗಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯ ಪೀಠ 31-08-2021ರಂದು ಈ ತೀರ್ಪು ನೀಡಿದೆ.
ಬೈಕ್ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ 8.0.10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಲಬುರ್ಗಿಯ ಮೋಟಾರ್ ವಾಹನ ಅಪಘಾತ ನ್ಯಾಯಾಧೀಕರಣ ನೀಡಿದ ಆದೇಶ ಪ್ರಶ್ನಿಸಿ ಯುನ್ನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆ ಸಲ್ಲಿಸಿದ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಮಹಮ್ಮದ್ ಸಿದ್ದಿಕಿ ವರ್ಸಸ್ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಕರ್ನಾಟಕ ಹೈಕೋರ್ಟ್ ಸದ್ರಿ ತೀರ್ಪಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂಬ ಸುಪ್ರೀಂ ಕೋರ್ಟ್ ನ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
ಬೈಕಿನಲ್ಲಿ ಮೂವರು ಪ್ರಯಾಣಿಸಿದ್ದರು ಮತ್ತು ಈ ಮೂಲಕ ವಿಮೆಯ ಷರತ್ತನ್ನು ಉಲ್ಲಂಘಿಸಲಾಗಿತ್ತು. ಜೊತೆಗೆ ಬೈಕ್ ಸವಾರ ಕೂಡ ಸರಿಯಾದ ಸಾಲನಾ ಪರವಾನಿಗೆಯನ್ನು ಹೊಂದಿರಲಿಲ್ಲ ಎಂದು ವಿಮಾಸಂಸ್ಥೆ ವಾದ ಮಂಡಿಸಿತ್ತು.