Published
8 hours agoon
By
Akkare Newsಬೆಳ್ತಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜಾ ಮುಸ್ಲಿಮರ ಬಗ್ಗೆ ಅವಹೇಳನಾಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಮುಸ್ಲಿಮ್ ಮುಖಂಡರ ಜೊತೆಗೆ ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆಸಿದ ಬಳಿಕ ಶ್ರೀ ಗೋಪಾಲ ಕೃಷ್ಣ ಭಟ್ರಬೈಲು, ದೇವರ ಗುಡ್ಡೆ ಸೇವಾ ಟ್ರಸ್ಟ್ ಮುಸ್ಲಿಮ್ ಒಕ್ಕೂಟಕ್ಕೆ ಪತ್ರ ಬರೆದು ಘಟನೆಗ ವಿಷಾದ ವ್ಯಕ್ತಪಡಿಸಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ ಬಗ್ಗೆ ನಮ್ಮ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಡಿರುವ ಕೆಲವೊಂದು ಮಾತುಗಳು ಗ್ರಾಮಸ್ಥರ ಮನಸ್ಸಿಗೆ ಬೇಸರ ತಂದಿದ್ದಾರೆ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿಯಿಂದ ವಿಷಾದ ವ್ಯಕ್ತಪಡಿಸುತ್ತದೆ. ಹಾಗೆಯೇ ನಿಮ್ಮ ಸಮುದಾಯದ ಸಹಕಾರವನ್ನು ಆಡಳಿತ ಮಂಡಳಿಯವರು ಸ್ವಾಗತಿಸುತ್ತೇವೆ. ಮುಂದೆಯೂ ಸಹ ಎಲ್ಲ ಸಮುದಾಯದವರು ಒಬ್ಬರಿಗೊಬ್ಬರು ಸಹಕಾರದೊಂದಿಗೆ ಬದುಕಬೇಕೆಂಬುವುದೇ ನಮ್ಮ ಆಶಯ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮೇ 3ರಂದು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಸಕ ಹರೀಶ್ ಪೂಂಜಾ, ಸೌಹಾರ್ದಯುತ ಕಾರ್ಯಕ್ರಮದಲ್ಲಿ ಕೋಮುವಾದದ ಭಾಷಣ ನಡೆಸಿದ್ದರು.