Published
9 hours agoon
By
Akkare Newsಬಂಟ್ವಾಳ : ನಾರಾಯಣಗುರುಗಳು ಸಾಮಾಜಿಕ ನ್ಯಾಯದ ಸಿದ್ಧಾಂತಗಳು, ಸಮಾನತೆಯ ತತ್ತ್ವಗಳು, ಮತ್ತು ವಿಧ್ಯಾಭ್ಯಾಸ, ಧಾರ್ಮಿಕ ಪ್ರವೇಶ, ಆತ್ಮಗೌರವಕ್ಕಾಗಿ ಮಾಡಿದ ಹೋರಾಟ ಮಹಿಳಾ ಸ್ವಾತಂತ್ರ್ಯದ ಬುನಾದಿಗೆ ಕೊಡುಗೆ ನೀಡಿದವು.
ನಾರಾಯಣಗುರು ಅವರ ಚಿಂತನೆಗಳು ಮತ್ತು ಕಾರ್ಯಗಳು ಮಹಿಳಾ ಸ್ವಾತಂತ್ರ್ಯಕ್ಕೆ ಶಕ್ತಿ ಮತ್ತು ಸ್ಫೂರ್ತಿ ನೀಡಿದವು. ಅವರು ರೂಢಿಸಿದ ಮಾನವೀಯ ಮೌಲ್ಯಗಳು ಮತ್ತು ಸಮಾನತೆಯ ಧ್ಯೇಯಗಳು ಮಹಿಳಾ ಸ್ವಾತಂತ್ರ್ಯದ ಬುನಾದಿಯಾಗಿವೆ. ಎಂದು ನ್ಯಾಯವಾದಿ ಶೈಲಜಾ ರಾಜೇಶ್ ತಿಳಿಸಿದರು.
ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಸದಸ್ಯೆ ಸುನಿತಾ ನಿತಿನ್ ಮಾರ್ನಬೈಲ್ ಇವರ ಮನೆಯಲ್ಲಿ ನಡೆದ ಭಜನಾ ಸಂಕೀರ್ತನೆ ಗುರುತತ್ವವಾಹಿನಿ ಮಾಲಿಕೆ 44 ರಲ್ಲಿ ಗುರುಸಂದೇಶ ನೀಡಿದರು.
ಈ ಸಂಧರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ಅರುಣ್ ಮಹಾಕಾಳಿಬೆಟ್ಟು, ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ, ಜಗನ್ನಾಥ್ ಕಲ್ಲಡ್ಕ, ಶೈಲೇಶ್ ಕುಚ್ಚಿಗುಡ್ಡೆ, ಭವಾನಿ ಅಮೀನ್, ನಾಗೇಶ್ ಏಲಬೆ ಮತ್ತಿತರರು ಉಪಸ್ಥಿತರಿದ್ದರು.
ಭಜನಾ ಸಂಕೀರ್ತನೆ ಸೇವೆಯಲ್ಲಿ ಹಾರ್ಮೋನಿಯಂನಲ್ಲಿ ರಾಜೇಶ್ ಅಮ್ಟೂರು ಮತ್ತು ತಬಲಾದಲ್ಲಿ ಸೃಜನ್ ಪಲ್ಲಿಪಾಡಿ ಸಹಕರಿಸಿದರು
ಯುವವಾಹಿನಿ ಬಂಟ್ವಾಳ ಘಟಕದ
ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.